ADVERTISEMENT

ತುಮಕೂರು: ₹36 ಸಾವಿರ ತಲುಪಿದ ಹುಣಸೆ ಹಣ್ಣು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 16:11 IST
Last Updated 7 ಮಾರ್ಚ್ 2025, 16:11 IST
ಹುಣಸೆ ಹಣ್ಣು
ಹುಣಸೆ ಹಣ್ಣು   

ತುಮಕೂರು: ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಲೆಯೂ ಏರುತ್ತಲೇ ಸಾಗಿದೆ. ಒಂದು ವಾರದ ಅಂತರದಲ್ಲಿ ಕ್ವಿಂಟಲ್‌ಗೆ ₹4 ಸಾವಿರ ಹೆಚ್ಚಳವಾಗಿದೆ.

ಈ ವಾರ ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್ ಕನಿಷ್ಠ ₹13 ಸಾವಿರದಿಂದ ಗರಿಷ್ಠ ₹36 ಸಾವಿರದವರೆಗೂ ಮಾರಾಟವಾಗಿದೆ. ಹಿಂದಿನ ವಾರ ₹13 ಸಾವಿರದಿಂದ ₹32 ಸಾವಿರ ಧಾರಣೆ ಸಿಕ್ಕಿತ್ತು.

ಇಳುವರಿ ತೀವ್ರವಾಗಿ ಕುಸಿದಿದ್ದು, ಮಾರುಕಟ್ಟೆಗೆ ಹಣ್ಣಿನ ಆವಕ ಕಡಿಮೆ ಆಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ADVERTISEMENT

ನಗರದ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ, ಗುರುವಾರದ ಸಮಯದಲ್ಲಿ 150 ಟನ್‌ಗಳಿಗೂ ಅಧಿಕ ಪ್ರಮಾಣದಲ್ಲಿ ಆವಕವಾಗುತ್ತಿತ್ತು. ಆದರೆ, ಈ ಬಾರಿ 100 ಟನ್ ಸಹ ದಾಟುತ್ತಿಲ್ಲ. ಈ ಎರಡು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ 50 ಟನ್‌ಗಳಿಗೂ ಹೆಚ್ಚು ಹಣ್ಣು ಬರುತ್ತಿತ್ತು. ಆದರೆ, ಶುಕ್ರವಾರ ಮಾರುಕಟ್ಟೆಗೆ ಒಂದು ಟನ್ ಸಹ ಬಂದಿಲ್ಲ. ಆವಕ ಕಡಿಮೆಯಾದಂತೆ ಬೆಲೆ ಏರಿಕೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.