ADVERTISEMENT

ತುಮಕೂರು: ಮಲ್ಲಪ್ಪಶೆಟ್ಟಿ ಪಾತ್ರದಲ್ಲಿ ನಿರಾಣಿ ಇದ್ದಾರೆ ಎಂದ ಅಂಬರೀಶ ನಾಗನೂರ 

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 15:40 IST
Last Updated 10 ಫೆಬ್ರುವರಿ 2021, 15:40 IST
ಅಂಬರೀಶ ನಾಗನೂರ
ಅಂಬರೀಶ ನಾಗನೂರ    

ತುಮಕೂರು: ಮುರುಗೇಶ ನಿರಾಣಿಗೆ ಸ್ವಾಮೀಜಿ ಮತ್ತು ಸಮಾಜದ ಹಿತ ಮುಖ್ಯವಲ್ಲ. ನಮ್ಮ ಸಮಾಜದಲ್ಲಿ ಮಲ್ಲಪ್ಪ ಶೆಟ್ಟಿ ಪಾತ್ರದಲ್ಲಿ ನಿರಾಣಿ ಇದ್ದಾರೆ ಎಂದು ಪಂಚಮಸಾಲಿ ಸಮಾಜದ ರೈತ ರಾಜ್ಯ ಘಟಕದ ಅಧ್ಯಕ್ಷ ಅಂಬರೀಶ ನಾಗನೂರ ಹೇಳಿದರು‌.

ಸಭೆಯಲ್ಲಿ ನಡೆದ ವಾಗ್ವಾದದ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ನಿರಾಣಿಗೆ ಪಾದಯಾತ್ರೆ ಮುಗಿಸುವುದೇ ಉದ್ದೇಶವಾಗಿದೆ.

ನಮ್ಮ ಸಾಹೇಬರ ವಿರುದ್ಧ (ವಿಜಯಾನಂದ ಕಾಶಪ್ಪನವರ್) ನಿರಾಣಿ ಮಾತನಾಡುವರು. ನಾವು 500 ಕಿ.ಮೀ ನಡೆದಿದ್ದೇವೆ. ಈಗ ಯಡಿಯೂರಪ್ಪನ ಸಂದೇಶ ಹೊತ್ತು ತಂದು ಪಾದಯಾತ್ರೆ ನಿಲ್ಲಿಸಿ ಎನ್ನುತ್ತಿದ್ದಾರೆ.

ADVERTISEMENT

ನಡೆದ ನೋವು ನಮಗೆ ಗೊತ್ತು. ಈಗ 50 ಮೀಟರ್ ನಡೆದಿಲ್ಲ ಎಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.