ADVERTISEMENT

ತುಮಕೂರು: ಕಾನೂನು ಗೌರವಿಸದ ಮುಸ್ಲಿಮರ ವಿರುದ್ಧ ಸೊಗಡು ಶಿವಣ್ಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 13:48 IST
Last Updated 9 ಏಪ್ರಿಲ್ 2020, 13:48 IST
ಶಿವಣ್ಣ
ಶಿವಣ್ಣ   

ತುಮಕೂರು: ಮೂಲಭೂತವಾದಿ ತಬ್ಲಿಗಿಗಳು ಹುಂಬತನವುಳ್ಳವರು. ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ವಿಧಿಸಿರುವ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಹೆಚ್ಚುತ್ತಿರುವ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದಾಗ ಈ ಜನರಿಂದಲೇ ಸೋಂಕು ಹೆಚ್ಚುತ್ತಿದೆ ಎನ್ನುವುದು ಸ್ಪಷ್ಟ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಮಕೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೆಲವು ಮುಸ್ಲಿಮರು ದೇಶದ ಕಾನೂನು ಗೌರವಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ನಾವು ಅವರ ವಿರುದ್ಧ ಅಸಹಕಾರ ಚಳವಳಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹಿಂದೂ ಪೌರಕಾರ್ಮಿಕರೇ ಮುಸ್ಲಿಮರ ಬಡಾವಣೆಗಳ ನೈರ್ಮಲ್ಯ ಕಾಪಾಡುತ್ತಿದ್ದಾರೆ. ಆದರೆ ಬಡಾವಣೆಗಳಲ್ಲಿ, ವಾಣಿಜ್ಯ ಪ್ರದೇಶಗಳಲ್ಲಿ ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಈ ಸಮುದಾಯದವರು ಓಡಾಡುತ್ತಿದ್ದಾರೆ. ಬೇರೆಯವರು ಇವರಿಂದ ತಪ್ಪಿಸಿಕೊಂಡು ಓಡಾಡುವ ಸ್ಥಿತಿ ಇದೆ ಎಂದು ಟೀಕಿಸಿದರು.

ADVERTISEMENT

ಜಿಲ್ಲೆಯಲ್ಲಿರುವ ಶೀತಲಕೇಂದ್ರಗಳನ್ನು ಸರ್ಕಾರ ವಶಕ್ಕೆ ಪಡೆದು, ತರಕಾರಿ, ಹೂ ಮತ್ತಿತರ ರೈತರ ಉತ್ಪನ್ನಗಳನ್ನು ಖರೀದಿಸಿ ಸಂಗ್ರಹಿಸಬೇಕು ಎಂದರು.

ಪಡಿತರ ವಿತರಣೆ ಅಂಗಡಿಗಳಲ್ಲಿ ಒಟಿಪಿ ನಂಬರ್‌ಗೆ ಹಣ ಪಡೆಯುತ್ತಿದ್ದಾರೆ. ಅನಧಿಕೃತ ದಿನಸಿ ಸಾಮಗ್ರಿಗಳನ್ನು (ಗೋಧಿಹಿಟ್ಟು, ಸೋಪು, ಸೋಪಿನಪುಡಿ) ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿದೆ. ಜಿಲ್ಲಾಡಳಿತ ಈ ಬಗ್ಗೆ ನಿಗಾವಹಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.