ADVERTISEMENT

ತುಮಕೂರು: ಇಬ್ಬರು ಶಿಕ್ಷಕರು ಅಮಾನತು

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 14:25 IST
Last Updated 21 ಜುಲೈ 2022, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಎಂ.ರೇವಣ ಸಿದ್ದಪ್ಪ ಗುರುವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಧುಗಿರಿ ತಾಲ್ಲೂಕಿನ ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ಸಿ.ಮಂಜುನಾಥ್ ಮತ್ತು ಸಜ್ಜೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ಟಿ.ಎಸ್.ಸಿದ್ದೇಶ್ವರ್ ಅಮಾನತುಗೊಂಡ ಶಿಕ್ಷಕರು.

ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಿ.ಮಂಜುನಾಥ್ ಅವರು 2018ರಿಂದ 2022ರ ಅವಧಿಯಲ್ಲಿ 74 ದಿನಗಳ ಕಾಲ ಪದೇ ಪದೇ ಗೈರು ಹಾಜರಾಗಿದ್ದರು.

ADVERTISEMENT

ಸಜ್ಜೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಟಿ.ಎಸ್.ಸಿದ್ದೇಶ್ವರ್ 2022 ಮೇ 17ರಿಂದ ಇಲ್ಲಿಯವರೆಗೂ ನಿರಂತರವಾಗಿ ಗೈರುಹಾಜರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.