ADVERTISEMENT

ಕಾಪು: ಮಾರಿಗುಡಿಗೆ ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 15:49 IST
Last Updated 20 ಏಪ್ರಿಲ್ 2025, 15:49 IST
<div class="paragraphs"><p>ದೇವಳದ ವತಿಯಿಂದ ನಟ ಸುನಿಲ್ ಶೆಟ್ಟಿ, ಅವರ ತಾಯಿಯನ್ನು ಗೌರವಿಸಲಾಯಿತು</p></div>

ದೇವಳದ ವತಿಯಿಂದ ನಟ ಸುನಿಲ್ ಶೆಟ್ಟಿ, ಅವರ ತಾಯಿಯನ್ನು ಗೌರವಿಸಲಾಯಿತು

   

ಕಾಪು (ಪಡುಬಿದ್ರಿ): ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಅವರು ಕುಟುಂಬ ಸಮೇತ ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದರು. 

ಈಚೆಗಷ್ಟೇ ಬ್ರಹ್ಮಕಲಶೋತ್ಸವದ ಮೂಲಕ ಹೊಸ ಮೆರುಗು ಪಡೆದಿರುವ ದೇವಾಲಯದಲ್ಲಿ ಶಿಲ್ಪಗಳ ರಚನೆಯನ್ನು ವೀಕ್ಷಿಸಿದರು. ದೇಗುಲದ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು.

ADVERTISEMENT

ಮೂಲತಃ ಮುಲ್ಕಿಯವರಾದ ಸುನಿಲ್ ಅವರು ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯುತ್ತಿರುವ ಉತ್ಸವದ ಪ್ರಯುಕ್ತ ತಾಯಿ ಜೊತೆ ಬಂದಿದ್ದರು.  ಸಂಬಂಧಿಕರು ಜೊತೆಗಿದ್ದರು. 

ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.