
ಪ್ರಜಾವಾಣಿ ವಾರ್ತೆ
ಮಗು (ಪ್ರಾತಿನಿಧಿಕ ಚಿತ್ರ)
ಉಡುಪಿ: ನಗರದ ಕಿನ್ನಿಮುಲ್ಕಿಯಲ್ಲಿ ಮಂಗಳವಾರ ನೀರು ಸೇದುವಾಗ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಕೀರ್ತನಾ ಮೃತಪಟ್ಟಿದೆ.
ತಾಯಿ ನಯನಾ ಮಗು ಎತ್ತಿಕೊಂಡು ಮನೆ ಬಳಿಯ ಬಾವಿಯಿಂದ ನೀರು ಸೇದುವಾಗ ಅವಘಡ ನಡೆದಿದೆ. ತಾಯಿ ಕೂಡಲೇ ಹಗ್ಗದ ನೆರವಿನಲ್ಲಿ ಬಾವಿಗೆ ಇಳಿದು ಮಗು ಮೇಲೆತ್ತಿದ್ದಾರೆ. ಬಳಿಕ ಆಸ್ಪತ್ರೆಗೆ ಒಯ್ಯುವಾಗ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.