ADVERTISEMENT

ಉಡುಪಿ: ಅಪರೂಪದ ರೆನಿನಾ ಏಡಿ ಪತ್ತೆ

ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಏಡಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 15:45 IST
Last Updated 28 ಜನವರಿ 2020, 15:45 IST
ರೆನಿನಾ ಪ್ರಬೇಧದ ಏಡಿ
ರೆನಿನಾ ಪ್ರಬೇಧದ ಏಡಿ   

ಉಡುಪಿ: ಮಲ್ಪೆ ಬಂದರಿನಿಂದ ಈಚೆಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಅಪರೂಪದ ಏಡಿ ಬಿದ್ದಿದೆ. ಆಫ್ರಿಕಾ, ಹವಾಯಿ ದ್ವೀಪ ಹಾಗೂ ಗ್ರೇಟ್‌ ಬ್ಯಾರಿಯಲ್‌ ರೀಫ್‌ಗಳಲ್ಲಿ ಹೆಚ್ಚಾಗಿ ಕಂಡುಬರುವ ರೆನಿನಾ ರೆನಿನಾ ಪ್ರಬೇಧದ ಏಡಿ ಕರಾವಳಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಂಡಿದೆ.

ಆಡುಭಾಷೆಯಲ್ಲಿ ಸ್ಪ್ಯಾನರ್ ಕ್ರಾಬ್ ಎಂದು ಕರೆಯಲಾಗುವ ಏಡಿಯು ಕಪ್ಪೆಯ ಆಕೃತಿ ಹೊಂದಿರುವುದು ವಿಶೇಷ. ಹೆಚ್ಚಾಗಿ ರಾತ್ರಿ ವೇಳೆ ಎಚ್ಚರವಿದ್ದು, ಶೆಟ್ಲಿ, ಕಪ್ಪೆಚಿಪ್ಪು, ಸ್ಟಾರ್‌ಫಿಶ್ ಸೇರಿದಂತೆ ಇತರೆ ಜಾತಿಗಳ ಮೀನುಗಳನ್ನು ತಿನ್ನುತ್ತದೆ.

ಬೆಳಗ್ಗಿನ ಹೊತ್ತುಸಮುದ್ರದ ಮರಳಿನಾಳದಲ್ಲಿ ಜೀವಿಸುತ್ತದೆ. 7 ರಿಂದ 9 ವರ್ಷಗಳವರೆಗೆ ಜೀವಿತಾವಧಿಯಲ್ಲಿ 400 ರಿಂದ 900 ಗ್ರಾಂ ತೂಗುತ್ತದೆ. ರುಚಿಕರ ಎಂಬ ಕಾರಣಕ್ಕೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ರೆನಿನಾಗೆ ಭಾರಿ ಬೇಡಿಕೆ ಎನ್ನುತ್ತಾರೆ ಕಾರವಾರದಸ್ನಾತಕೋತ್ತರ ಅಧ್ಯಯನ ಕೇಂದ್ರದಕಡಲ ಜೀವಶಾಸ್ತ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್‌ ಹರಗಿ.

ADVERTISEMENT

ನೋಡಲು ರಂಗುರಂಗಾಗಿ ಕಾಣುವ ರೆನಿನಾ 2006ರಲ್ಲಿ ಪಂಬನ್ ಕಡಲತೀರದಲ್ಲಿ ಏಡಿ ದೊರಕಿದ ಮಾಹಿತಿ ಇದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.