ADVERTISEMENT

ಹೆಬ್ರಿ | ಸೈಬರ್ ಸೆಕ್ಯುರಿಟಿ ಚಿತ್ರಕಲೆ ಸ್ಪರ್ಧೆ: ಪರೀಕ್ಷಿತ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:46 IST
Last Updated 2 ನವೆಂಬರ್ 2025, 4:46 IST
ಪರೀಕ್ಷಿತ್ ಅವರಿಗೆ ಎಸ್‌ಪಿ ಹರಿರಾಮ್ ಶಂಕರ್ ಪ್ರಶಸ್ತಿ ವಿತರಿಸಿದರು
ಪರೀಕ್ಷಿತ್ ಅವರಿಗೆ ಎಸ್‌ಪಿ ಹರಿರಾಮ್ ಶಂಕರ್ ಪ್ರಶಸ್ತಿ ವಿತರಿಸಿದರು   

ಹೆಬ್ರಿ: ಜಿಲ್ಲಾ ಪೊಲೀಸ್ ಇಲಾಖೆಯು ಪದವಿಪೂರ್ವ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಅವೇರ್‌‌ನೆಸ್ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಇಲ್ಲಿನ ಎಸ್.ಆರ್. ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಪರೀಕ್ಷಿತ್ ಆಚಾರ್ಯ ಮಾರಾಳಿ ಪ್ರಥಮ ಸ್ಥಾನ ಪಡೆದರು.

ಪರೀಕ್ಷಿತ್ ಅವರಿಗೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಪ್ರಶಸ್ತಿ ವಿತರಿಸಿದರು. ಪರೀಕ್ಷಿತ್ ಮಾರಾಳಿಯ ಮಂದಾರ ಆಚಾರ್ಯ ಮತ್ತು ವೀಣಾ ಆಚಾರ್ಯ ದಂಪತಿ ಪುತ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT