
ಪ್ರಜಾವಾಣಿ ವಾರ್ತೆ
ಕುಂದಾಪುರ: ಇಲ್ಲಿನ ಶಾಸ್ತ್ರೀ ಸರ್ಕಲ್ ಬಳಿಯ ಎಸ್‌ಪಿಜಿ ಗೋಲ್ಡ್ ಮತ್ತು ಡೈಮಂಡ್ ಅಂಗಡಿಯಲ್ಲಿ ಚಿನ್ನ ತೆಗೆದುಕೊಳ್ಳುವ ನೆಪದಲ್ಲಿ ಕೆಲಸದವರ ಕಣ್ಣು ತಪ್ಪಿಸಿ 9 ಗ್ರಾಂ ಮೌಲ್ಯದ ₹1.25 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿದ್ದ ಬಂಟ್ವಾಳ ತಾಲ್ಲೂಕಿನ ಬಡಗ ಕಜೆಕಾರ್ ಗ್ರಾಮದ ರಮೇಶ (42) ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಆರೋಪಿಯಿಂದ ಕಳ್ಳತನ ಮಾಡಿದ್ದ ಚಿನ್ನದ ಚೈನ್, ಆತನಲ್ಲಿದ್ದ ₹33 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪಿಎಸ್ಐಗಳಾದ ನಂಜಾ ನಾಯ್ಕ್ ಎನ್, ಪುಷ್ಪಾ, ಸಿಬ್ಬಂದಿ ಸಂತೋಷ, ಮಹಾಬಲ ಶೆಟ್ಟಿಗಾರ, ಪ್ರಿನ್ಸ್, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್, ಚಂದ್ರಶೆಟ್ಟಿ ಅವರ ತಂಡ ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.