ADVERTISEMENT

ಬೈಂದೂರು: ರಂಗೋಲಿಯಲ್ಲಿ ರಾಷ್ಟ್ರಧ್ವಜದ ಚಿತ್ತಾರ ಬರೆದ ಭಾರತಿ ಮರವಂತೆ

ತಮಿಳುನಾಡಿನ ಜಾಕಿ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 15:37 IST
Last Updated 22 ಸೆಪ್ಟೆಂಬರ್ 2022, 15:37 IST
ಡಾ. ಭಾರತಿ ಮರವಂತೆ
ಡಾ. ಭಾರತಿ ಮರವಂತೆ   

ಬೈಂದೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಾಕಿ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಸಂಸ್ಥೆ (ಜಾಕಿ ಕ್ರಿಯೇಷನ್) ತಮಿಳುನಾಡಿನ ಮಯಿಲಾಡುತುರೈ ಜಿಲ್ಲೆಯಲ್ಲಿ ಆಯೋ ಜಿಸಿದ್ದ ರಂಗೋಲಿಯಲ್ಲಿ ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆಯಲ್ಲಿ ಇಲ್ಲಿನ ಡಾ. ಭಾರತಿ ಮರವಂತೆ ಗಮನಾರ್ಹ ಸಾಧನೆ ಮಾಡಿದ್ದಾರೆ. 76 ನಿಮಿಷಗಳಲ್ಲಿ 76 ಧ್ವಜಗಳನ್ನು ಸೃಷ್ಟಿಸಿದ್ದಾರೆ. ಜಾಕಿ ಬುಕ್ ಆಫ್ ವರ್ಡ್ ರೆಕಾರ್ಡ್ ಸಂಸ್ಥೆಯವರು ಪ್ರಮಾಣಪತ್ರ, ಬ್ಯಾಡ್ಜ್, ಟ್ರೋಫಿ, ಪದಕ, ಟಿ ಶರ್ಟ್ ನೀಡಿ ಭಾರತಿಯವರನ್ನು ಗೌರವಿಸಿದ್ದಾರೆ.

ಬೈಂದೂರು ತಾಲ್ಲೂಕಿನ ಮರವಂತೆಯ ಭಾರತಿ ಅವರು ‘ಕರಾವಳಿ ಕರ್ನಾಟಕದ ರಂಗೋಲಿ ಕಲೆ’ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ರಂಗೋಲಿ ಕಲಾಪರಿಷತ್ತಿನ ಸಂಸ್ಥಾಪಕರಾಗಿ, ರಂಗೋಲಿ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT