
ಪ್ರಾತಿನಿಧಿಕ ಚಿತ್ರ
ಕುಂದಾಪುರ: ಶ್ರೀಗಂಧದ ಮರಗಳ ಕಳ್ಳತನ ಮತ್ತು ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಆರೋಪ ಸಾಬೀತಾದ ಕಾರಣ ತಾಲ್ಲೂಕಿನ ಉಪ್ಪುಂದ ಗ್ರಾಮದ ರವಿಚಂದ್ರ ಎಂಬುವವರಿಗೆ ಒಂದನೇ ಹೆಚ್ಚುವರಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಲಾ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಅರಣ್ಯ ಕಾಯ್ದೆ 86 ಮತ್ತು 87ರ ಅಡಿಯಲ್ಲಿ ನ್ಯಾಯಾಧೀಶೆ ಶ್ರುತಿ ಎಸ್. ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರತಿ ಆಪಾದನೆಗೂ ₹10 ಸಾವಿರ ದಂಡವನ್ನೂ ವಿಧಿಸಿದ್ದಾರೆ.
1999ರಲ್ಲಿ ತಾಲ್ಲೂಕಿನ ನೂಜಾಡಿ ಗ್ರಾಮದ ಮೂಡಾರಿ ಗುಡ್ಡೆ ಸುರಕ್ಷಿತ ಅರಣ್ಯ ಪ್ರದೇಶದ ಗೇರು ನೆಡುತೋಪಿನಲ್ಲಿ 12 ಶ್ರೀಗಂಧದ ಮರಗಳನ್ನು ಕಡಿದ ಆರೋಪದ ಮೇಲೆ ಅರಣ್ಯ ಕಾಯ್ದೆ ಅಡಿಯಲ್ಲಿ ತನಿಖೆ ಕೈಗೊಂಡಿದ್ದ ಕುಂದಾಪುರ ಅರಣ್ಯ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅರಣ್ಯ ಸಿಬ್ಬಂದಿ ಸಾಕ್ಷಿಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯು 1999ರಿಂದ 2019ರವರೆಗೂ ತಲೆಮರೆಸಿಕೊಂಡು 2019ರಲ್ಲಿ ಪತ್ತೆಯಾಗಿದ್ದ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲೆ ಉಮಾ ದಾಮೋದರ ನಾಯ್ಕ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.