ADVERTISEMENT

ಶಿರ್ವ | ಉದ್ಯಾವರ: ಕಾಮಗಾರಿಗಳಿಗೆ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:56 IST
Last Updated 6 ಜನವರಿ 2026, 6:56 IST
ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು
ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು   

ಶಿರ್ವ: ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹60 ಲಕ್ಷ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಪಂಚಾಯಿತಿ ವ್ಯಾಪ್ತಿಯ ಪಿತ್ರೋಡಿ ಪ್ರವೀಣ್ ಅವರ ಮನೆಯಿಂದ ರಮೇಶ್ ಕುಮಾರ್ ಅವರ ಮನೆವರೆಗೆ ರಸ್ತೆ ವಿಸ್ತರಣೆಗೆ ₹10 ಲಕ್ಷ, ಅಂಕುದ್ರು ಮುಖ್ಯರಸ್ತೆ ಕಾಂಕ್ರೀಟೀಕರಣಕ್ಕೆ ₹10 ಲಕ್ಷ, ಸಂಪಿಗೆನಗರ ಮಹಾಕಾಳಿ 1ನೇ ಅಡ್ಡ ರಸ್ತೆ ವಿಸ್ತರಣೆಗೆ ₹10 ಲಕ್ಷ, ಕೇದಾರ್ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಿ ರಸ್ತೆ ವಿಸ್ತರಣೆಗೆ ₹10 ಲಕ್ಷ, ರಾಜಾರಾಮ್ ಭಟ್ ಮನೆ ಬಳಿ ರಸ್ತೆ ವಿಸ್ತರಣೆಗೆ ₹10 ಲಕ್ಷ, ಪಿತ್ರೋಡಿ ನೀಲಾಧರ್ ಸಾಲಿಯಾನ್, ಸುಗಂಧಿ ಶೆಟ್ಟಿ ಮನೆ ಬಳಿ ರಸ್ತೆ ಕಾಂಕ್ರೀಟೀಕರಣಕ್ಕೆ ₹10 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ ಕುಂದರ್, ಸದಸ್ಯರಾದ ರಾಧಾಕೃಷ್ಣ ಶ್ರೀಯಾನ್, ಜಿತೇಂದ್ರ ಶೆಟ್ಟಿ, ಯೋಗೀಶ್ ಕೋಟ್ಯಾನ್, ಸಚಿನ್ ಪಿತ್ರೋಡಿ, ರಮಾನಂದ ಸೆರ್ವೇಗಾರ್, ಮಿಥೇಶ್, ಚೇತನ್, ವೀಣಾ, ಸರಿತಾ, ರೇಖಾ, ಪ್ರಮೀಳಾ, ವಿಜಯ್ ಕುಮಾರ್ ಉದ್ಯಾವರ, ಸಂತೋಷ್ ಬೊಳ್ಜೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.