ಹಳಿಯಾಳ: ಬಗರ್ ಹುಕುಂ ಸಮಿತಿಯಲ್ಲಿ ಹಳಿಯಾಳ ತಾಲ್ಲೂಕಿನಿಂದ ಬಂದ ಅರ್ಜಿಗಳನ್ನು ಸಂರ್ಪೂಣವಾಗಿ ವಿಲೇವಾರಿ ಮಾಡಿ ಆಯ್ದ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಸೋಮವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಳಿಯಾಳ ಹಾಗೂ ದಾಂಡೇಲಿ ತಾಲ್ಲೂಕಿನ ಬಗರ್‌ಹುಕುಂ ಸಮಿತಿ ಸಭೆಯ ಮಂಜೂರಾತಿ ಆದೇಶ ನೀಡಿ ಅವರು ಮಾತನಾಡಿದರು.
‘ಹಳಿಯಾಳ ತಾಲ್ಲೂಕಿನಲ್ಲಿ ಕಳೆದ ಬಾರಿ ಸಮಿತಿ ಸಭೆಯಲ್ಲಿ 15 ಅರ್ಜಿ ಹಾಗೂ ಇನ್ನು 2 ಅರ್ಜಿಗಳು ಒಟ್ಟು 17 ಅರ್ಹ ಫಲಾನಿಭವಿಗಳಿಗೆ ಜಮೀನು ಮಂಜೂರಾತಿ ನೀಡಲಾಗಿದೆ. ದಾಂಡೇಲಿ ತಾಲ್ಲೂಕಿನ 8 ಪ್ರಕರಣಗಳು ಸಮಿತಿಯ ಮುಂದೆ ವಿಚಾರಣೆಯಲ್ಲಿದ್ದು ಯಾವುದೇ ಆಕ್ಷೇಪಣೆ ಬಂದಿಲ್ಲಾ. ಎಲ್ಲ ಪ್ರಕರಣಗಳಿಗೆ ಮಂಜೂರಾತಿ ನೀಡಲಾಗಿದೆ’ ಎಂದರು.
‘ಈ ಹಿಂದೆ ಅತಿಕ್ರಮಣ ಮಾಡಿ ಸರ್ಕಾರದ ನಿಯಮಾವಳಿಯಂತೆ ಅರ್ಜಿಗಳನ್ನು ಸಲ್ಲಿಸಿದಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಿರಿ. ಅರ್ಹ ಪಲಾನುಭವಿಗಳಾದ ಯಾವುದೇ ರೈತರಿಗೂ ಸಹ ಅನ್ಯಾಯವಾಗಬಾರದು. ಬಗರ್ ಹುಕುಂ ಸಮಿತಿಯಲ್ಲಿ ಯಾವುದೇ ಅರ್ಜಿ ಪರಿಶೀಲನೆಯಿಂದ ತಿರಸ್ಕೃತಗೊಳ್ಳುವದಿದ್ದಲ್ಲಿ ಅಂತಹ ಪ್ರತಿ ಅರ್ಜಿದಾರರಿಗೆ ಪೂರ್ವಭಾವಿಯಾಗಿ ನೋಟಿಸ್ ನೀಡಿರಿ’ ಎಂದು ಅಧಿಕಾರಿಗಳಿಗೆ ಹೇಳಿದರು.
ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ದಾಂಡೇಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ಹಳಿಯಾಳ ಬಗರ್ ಹುಕ್ಕುಂ ಸಮಿತಿ ಸದಸ್ಯರಾದ ಸುಭಾಷ್ ಕೊರ್ವೆಕರ್, ಜೂಲಿಯಾನ ಸಿದ್ದಿ, ಎಚ್.ಬಿ.ಪರಶುರಾಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.