
ಪ್ರಜಾವಾಣಿ ವಾರ್ತೆ
ಕಾರವಾರ: 'ಶಾಸಕರಾದ ಇಕ್ಬಾಲ್ ಹುಸೇನ್ ಸೇರಿ ಕೆಲವರು ಬಾಯಿ ಮುಚ್ಚಿಕೊಂಡಿದ್ದರೆ ನನಗೆ ಒಳ್ಳೆಯದಾಗುತ್ತದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
'ವಿದೇಶಕ್ಕೆ ಪ್ರವಾಸ ಹೋದವರೂ ನಮ್ಮವರೆ. ಅವರು ಮರಳಿದ ಬಳಿಕ ಏಕೆ ಹೋಗಿದ್ದರು ಎಂದು ಕೇಳುತ್ತೇನೆ. ಸದ್ಯಕ್ಕೆ ನನ್ನ ಬಗ್ಗೆ ಮಾತನಾಡುತ್ತಿರುವ ಇಕ್ಬಾಲ್, ರವಿ ಗಣಿಗ, ಶಿವಗಂಗಾ ಬಸವರಾಜ್ ಅವರೆಲ್ಲ ಸುಮ್ಮನಿದ್ದರೆ ಸಾಕು' ಎಂದು ಇಲ್ಲಿ ಭಾನುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
'ಶಾಸಕ ಚಂದ್ರು ಲಮಾಣಿ ಅವರ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಸರಿಯಾದ ತನಿಖೆ ನಡೆಸಲಿದೆ. ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.