
ಹಳಿಯಾಳ: ವಿಬಿ–ಜಿ ರಾಮ್ ಜಿ ರದ್ದುಗೊಳಿಸಿ ಈ ಹಿಂದಿನಂತೆಯೇ ಮನರೇಗಾ ಯೋಜನೆ ಮುಂದುವರೆಸಬೇಕೆಂದು ಆಗ್ರಹಿಸಿ ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಮನರೇಗಾ ಯೋಜನೆ ಮರು ಜಾರಿಗೆ ಒತ್ತಾಯಿಸಿ ರಾಷ್ಟ್ರಪತಿ ಅವರಿಗೆ ಬರೆದ ಪತ್ರವನ್ನು ತಹಶೀಲ್ದಾರ ಫೀರೋಜ ಷಾ ಸೋಮನಕಟ್ಟಿ ಅವರಿಗೆ ಸಲ್ಲಿಸಲಾಯಿತು.
ಇಲ್ಲಿನ ಶಾಸಕರ ಕಚೇರಿಯಿಂದ ಮೆರವಣಿಗೆ ಆರಂಭಿಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಿಂದಲ್ಲಿ ಸಾಗಿ ತಹಶೀಲ್ದಾರ ಕಚೇರಿಗೆ ಪ್ರತಿಭಟನಾಕಾರರು ತೆರಳಿದರು.
ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ‘ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿಯವರ ಹೆಸರು ಇಲ್ಲದ ಉದ್ಯೋಗ ಖಾತರಿಯನ್ನು ನೀಡದೇ ಯೋಜನೆಯನ್ನು ಬದಲಿಸಿದ್ದರಿಂದ ಕೂಲಿ ಕಾರ್ಮಿಕರು, ರೈತರು, ಮಹಿಳೆಯರ ಬದುಕು ದುಸ್ತರಗೊಳ್ಳಲಿದೆ. ಕೇಂದ್ರ ಸರಕಾರ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿ ಮೂಲ ಕಾಯ್ದೆಗೆ ತಿದ್ದುಪಡಿ ತಂದಿದೆ’ ಎಂದು ದೂರಿದರು.
‘ಗ್ರಾಮ ಪಂಚಾಯತಿಗಳಲ್ಲಿ ವರ್ಷ ಪೂರ್ತಿ ಮಾಡುವ ಅಗತ್ಯ ಕೆಲಸಗಳಿಗೆ ಸಂಪೂರ್ಣ ಅಧಿಕಾರ ಮೊಟಕುಗೊಳಿಸುವ ಪ್ರಯತ್ನ ನಡೆದಿದೆ. ಈ ಹಿಂದೆ ಶೇ 90ರಷ್ಟು ಕೇಂದ್ರ ಸರ್ಕಾರ ನರೇಗಾ ಯೋಜನೆ ಅಡಿಯಲ್ಲಿ ನೀಡುತಿದ್ದು ಈಗ ಶೇ 60ರಷ್ಟು ಕೊಡಲಾಗುತ್ತದೆ. ಇದರಿಂದ ರಾಜ್ಯ ಸರ್ಕಾರ ಆರ್ಥಿಕಕ ಹೊರೆಯಾಗಲಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ಮುಖಂಡರಾದ ಸುಭಾಸ ಕೊರವೆಕರ, ಬಿ.ಡಿ ಚೌಗುಲೆ, ದೆಮಣ್ಣಾ ಶಿರೋಜಿ, ಮಾಲಾ ಬ್ರಗಂಜಾ, ಉಮೇಶ ಬೋಳಶೆಟ್ಟಿ, ಕೆ.ಆರ್.ರಮೇಶ, ಇತರರು ಪಾಲ್ಗೊಂಡಿದ್ದರು.
ವಿಪಕ್ಷಗಳು ಜನಾಭಿಪ್ರಾಯ ಆಲಿಸದೆ ಕೇಂದ್ರ ಸರ್ಕಾರ ವಿಬಿ–ಜಿ ರಾಮ್ ಜಿ ಜಾರಿಗೆ ತಂದು ಬಡವರು ಕೂಲಿಕಾರ್ಮಿಕರ ಉದ್ಯೋಗ ಕಿತ್ತುಕೊಳ್ಳಲು ಮುಂದಾಗಿದೆಆರ್.ವಿ.ದೇಶಪಾಂಡೆ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.