ADVERTISEMENT

ಹಳಿಯಾಳ | ತ್ವರಿತ ಸೇವೆಗಾಗಿ ಭೂ ದಾಖಲೆ ಗಣಕೀಕರಣ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 13:08 IST
Last Updated 17 ಜನವರಿ 2025, 13:08 IST
ಹಳಿಯಾಳದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ಕಂದಾಯಗಳ ಡಿಜಿಟಲೀ ಕರಣಕ್ಕೆ ಶಾಸಕ ಆರ್ ವಿ ದೇಶಪಾಂಡೆ ಚಾಲನೆ ನೀಡಿದರು. ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ ಮತ್ತಿತರರು ಪಾಲ್ಗೋಂಡಿದ್ದರು.
ಹಳಿಯಾಳದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ಕಂದಾಯಗಳ ಡಿಜಿಟಲೀ ಕರಣಕ್ಕೆ ಶಾಸಕ ಆರ್ ವಿ ದೇಶಪಾಂಡೆ ಚಾಲನೆ ನೀಡಿದರು. ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ ಮತ್ತಿತರರು ಪಾಲ್ಗೋಂಡಿದ್ದರು.   

ಹಳಿಯಾಳ: ‘ತ್ವರಿತ ಆಡಳಿತ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಭೂ ದಾಖಲೆಯನ್ನು ಗಣಕೀಕರಣಗೊಳಿಸಲಾಗುತ್ತಿದೆ. ಇದರಿಂದ ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ನೇರವಾಗಿ ಡಿಜಿಟಲ್‌ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳುವ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಭೂ ಸುರಕ್ಷಾ ಯೋಜನೆ ಅಡಿಯಲ್ಲಿ ಕಂದಾಯ ದಾಖಲೆಗಳನ್ನು ಗಣಿಕೀಕರಣಗೊಳಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಂದಾಯ ಇಲಾಖೆಯ ರೆಕಾರ್ಡ್ ರೂಮ್ ಅನ್ನು ಪರಿಶೀಲಿಸಿದ ದೇಶಪಾಂಡೆ, ಭೂ ದಾಖಲೆಗಳ ಸಂಗ್ರಹಿಸಿ ಕಾಯಂ ಆಗಿ ಯಾವುದೇ ರೀತಿಯಿಂದ ಹಾಳಾಗದಂತೆ ಇಡುವ ಕುರಿತು ಸಲಹೆ ನೀಡಿದರು.

ADVERTISEMENT

1927ನೇ ಸಾಲಿನಿಂದ ಹಳೆಯ ದಾಖಲೆಗಳ ಸ್ಕ್ಯಾನ್ ಮಾಡುವ ಬಗೆಯನ್ನು ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣವರ ವಿವರಿಸಿದರು.

ಹಳಿಯಾಳದ ಕಂದಾಯ ಇಲಾಖೆಯ ರೆಕಾರ್ಡ್ ರೂಂ ನಲ್ಲಿರುವ ಸುಮಾರು 1866ರ ದಾಖಲೆಗಳನ್ನು ಶಾಸಕ ಆರ್ ವಿ ದೇಶಪಾಂಡೆ ಪರಿಶೀಲಿಸಿದರುತಹಶೀಲ್ದಾರ ಪ್ರವೀಣ ಹುಚ್ಚಣ್ಣವರ ಮತ್ತಿತರರು ಪಾಲ್ಗೋಂಡಿದ್ದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.