ADVERTISEMENT

ಉದ್ಧವ್ ಠಾಕ್ರೆಗೆ ಬೇರೆ ಕೆಲಸ ಇಲ್ಲ: ಸಚಿವ ಪ್ರಭು ಚೌವಾಣ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 9:48 IST
Last Updated 18 ಜನವರಿ 2021, 9:48 IST
ಸಚಿವ ಪ್ರಭು
ಸಚಿವ ಪ್ರಭು    

ಕಾರವಾರ: 'ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಗೆ ಬೇರೆ ಕೆಲಸ ಇಲ್ಲ. ರಾಜಕೀಯಕ್ಕಾಗಿ ಗಡಿ ವಿವಾದವನ್ನು ಕೆದಕುತ್ತಿದ್ದಾರೆ. ನಮ್ಮ ರಾಜ್ಯದ ಒಂದು ಇಂಚನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ' ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌವಾಣ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರಿರುವ ವಿವಿಧ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು' ಎಂದು ಉದ್ಧವ್ ಠಾಕ್ರೆ ನೀಡಿದ ಹೇಳಿಕೆಯನ್ನು ಖಂಡಿಸಿದರು.

'ತೀನ್ ತಗಡಾ, ಕಾಮ್ ಬಿಗಡಾ (ಮೂವರು ಸೇರಿ ಕೆಲಸ ಕೆಡಿಸಿದರು) ಎಂಬ ರೀತಿಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್.ಸಿ.ಪಿ ಮತ್ತು ಶಿವಸೇನೆ ಕೆಲಸ ಮಾಡುತ್ತಿವೆ. ಅಲ್ಲಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ ಮುಖಂಡರು ಯಾವ ಕಾರಣಕ್ಕಾಗಿ ಗಡಿ ವಿವಾದ ಶುರು ಮಾಡ್ತಾರೆ ಎಂದು ಅರ್ಥವಾಗುತ್ತಿಲ್ಲ. ಕರ್ನಾಟಕದ ಆರು ಕೋಟಿ ಜನರೂ ನಮ್ಮ ದೇವರು. ಅವರು ನಮ್ಮ ರಾಜ್ಯ ಬಿಟ್ಟು ಮಹಾರಾಷ್ಟ್ರ ಸೇರುವುದಿಲ್ಲ' ಎಂದರು.

ADVERTISEMENT

'ಬೆಳಗಾವಿ, ಕಾರವಾರ, ನಿಪ್ಪಾಣಿ, ಖಾನಾಪುರ ಸೇರಿದಂತೆ ರಾಜ್ಯದ ಎಲ್ಲ ಭಾಗಗಳೂ ನಮ್ಮವೇ.ಕರ್ನಾಟಕ ಅಖಂಡ, ಒಂದಿಂಚೂ ಜಮೀನು ಬಿಡಲ್ಲ. ಮುಖ್ಯಮಂತ್ರಿ ಕೂಡ ನಿಟ್ಟಿನಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.