
ಪ್ರಜಾವಾಣಿ ವಾರ್ತೆ
ಪ್ರಾತಿನಿಧಿಕ ಚಿತ್ರ
ಕಾರವಾರ: ಹೊನ್ನಾವರ ತಾಲ್ಲೂಕಿನ ಮಂಕಿಯ ಮಂಡಿ ಕಡಲತೀರದ ಬಳಿ ಗುರುವಾರ ಸಂಜೆ ಮೀನು ಹಿಡಿಯಲು ಹೋದ ಸಹೋದರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮದನ ನಾರಾಯಣ ಖಾರ್ವಿ (17), ಸುಜನ ನಾರಾಯಣ ಖಾರ್ವಿ (15) ಮೃತ ಸಹೋದರರು. ಪಾತಿ ದೋಣಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಅಲೆಗಳ ಅಬ್ಬರಕ್ಕೆ ದೋಣಿ ಮುಳುಗಿದೆ. ತಡರಾತ್ರಿ ಅವರ ಮೃತದೇಹಗಳು ಪತ್ತೆಯಾಗಿದೆ ಎಂದು ಮಂಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.