ADVERTISEMENT

ಮಹಾಶಿವರಾತ್ರಿ: ಗೋಕರ್ಣದಲ್ಲಿ ಆತ್ಮಲಿಂಗಕ್ಕೆ ಪೂಜೆಗೈದು ಪಾವನರಾದ ಶಿವ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 4:40 IST
Last Updated 8 ಮಾರ್ಚ್ 2024, 4:40 IST
<div class="paragraphs"><p>ಮರಳಿನ ಲಿಂಗ ಮಾಡಿ&nbsp;ಪೂಜೆ ಮಾಡಿದ ಭಕ್ತರು</p></div>

ಮರಳಿನ ಲಿಂಗ ಮಾಡಿ ಪೂಜೆ ಮಾಡಿದ ಭಕ್ತರು

   

ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಉತ್ಸಾಹದೊಂದಿಗೆ ಆತ್ಮಲಿಂಗ ಪೂಜೆಯಲ್ಲಿ ಪಾಲ್ಗೊಂಡರು.

ಸಮುದ್ರ, ಕೋಟಿತೀರ್ಥದಲ್ಲಿ ಸ್ನಾನ ಮಾಡಿ, ಮಧ್ಯರಾತ್ರಿಯಿಂದಲೇ ಮಹಾಗಣಪತಿ ಮತ್ತು ಮಹಾಬಲೇಶ್ವರನ ಪೂಜೆಗಾಗಿ ಸರತಿ ಸಾಲಿನಲ್ಲಿ ಭಕ್ತರು ನಿಂತು, ಬೆಳಗಿನ ಜಾವ ಪೂಜೆ ಅರ್ಪಿಸಿ ಧನ್ಯತಾಭಾವಕ್ಕೆ ಒಳಗಾದರು.

ADVERTISEMENT

ಸುತ್ತ-ಮುತ್ತಲಿನ ಹಳ್ಳಿಯ ಜನರು ಬೆಳಗಿನ ಸಮಯದಲ್ಲಿ ಆತ್ಮಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಹಾರಾಷ್ಟ್ರ ಮತ್ತು ಆಂಧ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಕೆಲವು ಭಕ್ತರು ಸಮುದ್ರದಲ್ಲಿ ಮರಳಿನ ಲಿಂಗ ಮಾಡಿ ತಾವೇ ಸ್ವತಃ ಪೂಜೆ ಮಾಡಿದರು.

ಕೆಲವು ಭಕ್ತರ ಅಸಮಾಧಾನ :

ಆತ್ಮಲಿಂಗಕ್ಕೆ ಮೇಲಿನಿಂದ ಅಭಿಷೇಕಕ್ಕೆ ಮಾತ್ರ ಅವಕಾಶ ನೀಡಿದ್ದು, ಭಕ್ತರಿಗೆ ವಿಶೇಷ ಪೂಜೆಗೂ ಆಸ್ಪದ ನೀಡಿಲ್ಲ. ಕೇವಲ ನೀರು, ಹಾಲು, ಪತ್ರೆ, ಹೂವು ಹಾಕಲು ಮಾತ್ರ ಅವಕಾಶ ನೀಡಲಾಗಿತ್ತು. ಹಲವು ವರ್ಷಗಳಿಂದ ಬರುತ್ತಿದ್ದ ಭಕ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಗೋಕರ್ಣ ಗ್ರಾಮ ಪಂಚಾಯಿತಿ ಜಾತ್ರೆ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಸಕಲ ಏರ್ಪಾಟು ಮಾಡಿದೆ. ಕೋಟಿತೀರ್ಥ ಮತ್ತು ಸಮುದ್ರದಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಫಲಕ ಅಳವಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಮುದ್ರ ತೀರದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಸ್ಥಳೀಯ ಲಯನ್ಸ್ ಕ್ಲಬ್ ಘಟಕ ಜಾತ್ರೆಗೆ ಬಂದ ಭಕ್ತರಿಗೆ ಗಣಪತಿ ದೇವಸ್ಥಾನದ ಹತ್ತಿರ ಮಜ್ಜಿಗೆ ವಿತರಣೆ ಮಾಡಿದರು. ರೋಟರಿ ಕ್ಲಬ್ ಗೋಕರ್ಣ ಘಟಕದ ವತಿಯಿಂದ ಭಕ್ತರಿಗೆ ಕೋಕಂ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.