
ಶಿರಸಿ: ಕಾರ್ಯನಿರತ ಪತ್ರಕರ್ತರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನರಸಿಂಹ ಅಡಿ ಚುನಾಯಿತರಾಗಿದ್ದಾರೆ.
ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮಾರುತಿ ನಾಯ್ಕ ಹೊನ್ನಾವರ, ಬಸವರಾಜ ಪಾಟೀಲ ಮುಂಡಗೋಡ, ಸುಮಂಗಲಾ ಹೊನ್ನೆಕೊಪ್ಪ ಶಿರಸಿ ಚುನಾಯಿತರಾದರು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಬೆಟ್ಟಕೊಪ್ಪ, ಖಜಾಂಚಿಯಾಗಿ ರಾಜೇಂದ್ರ ಶಿಂಗನಮನೆ, ರಾಜ್ಯ ಕಾರ್ಯಕಾರಿಣಿಸಿ ಸದಸ್ಯರಾಗಿ ವಿಠ್ಠಲದಾಸ ಕಾಮತ, ಕಾರ್ಯದರ್ಶಿಯಾಗಿ ಜೆ.ಆರ್.ಸಂತೋಷಕುಮಾರ, ಪ್ರಭಾವತಿ ಗೋವಿ, ಅನಂತ ದೇಸಾಯಿ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಸಂದೇಶ ಭಟ್ ಬೆಳಖಂಡ, ಪ್ರವೀಣ ಹೆಗಡೆ ಕೊಂಬೆಮನೆ, ರವಿ ಹೆಗಡೆ ಗಡಿಹಳ್ಳಿ, ಜಯರಾಜ ಗೋವಿ, ಫಯಾಜ್ ಮುಲ್ಲಾ, ಶಾಂತೇಶ ಬೆನಕನಕೊಪ್ಪ, ಸತೀಶ ತಾಂಡೇಲ, ಸುಧೀರ ಕಡ್ನೀರ್, ಶ್ರೀಧರ ಹೆಗಡೆ, ಹರೀಶ ಅವಿರೋಧವಾಗಿ ಆಯ್ಕೆಯಾಗಿದ್ದರು.
ಮುಖ್ಯ ಚುನಾವಣಾಧಿಕಾರಿಯಾಗಿ ಅಶೋಕ ಹಾಸ್ಯಗಾರ, ಸಹಾಯಕರಾಗಿ ರಘುಪತಿ ಯಾಜಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಆರ್.ಪಿ.ಹೆಗಡೆ, ಅಶ್ವಿನಿ ಗೌಡ ಸಹಕರಿಸಿದರು.