ಹಳಿಯಾಳ: ಯುವ ಸಮುದಾಯ ಕೈಗೊಂಡ ಚಿಕ್ಕ ಚಿಕ್ಕ ಆವಿಷ್ಕಾರಗಳು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುತ್ತವೆ ಎಂದು ವಿಆರ್‌ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಹೇಳಿದರು.
ಇಲ್ಲಿನ ದೇಶಪಾಂಡೆ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ಟಸ್ಟ್ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಹಮ್ಮಿಕೊಂಡ ತಾಂತ್ರಿಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಲ್ಲಿರುವ ತಾಂತ್ರಿಕ ಕೌಶಲ, ಜ್ಞಾನ, ಆಸಕ್ತಿ, ಸೃಜನಶೀಲತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಹಮ್ಮಿಕೊಂಡ ಈ ಪ್ರದರ್ಶನದಲ್ಲಿ ವಿವಿಧ ಮಾದರಿಗಳು ವಿದ್ಯಾರ್ಥಿಗಳಲ್ಲಿರುವ ಕ್ರಿಯಾ ಕ್ಷಮತೆಯನ್ನು ತೋರಿಸುತ್ತವೆ’ ಎಂದರು.
ಹೊಸ ಮಾದರಿಯ ಜೂಟ್ ವಾಚ್, ಜೂಟ್ ಫ್ಯಾಬ್ರಿಕ್ ಡ್ರೆಸ್, ಹೈಡ್ರೊ ಎಲೆಕ್ಟ್ರಿಕ್ ಪವರ್ ಜನರೇಶನ್ ಪ್ಲಾಂಟ್, ವಿವಿಧ ಸೋಲಾರ್ ಉಪಕರಣಗಳು, ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ವರ್ಕಿಂಗ್ ಮಾಡೆಲ್ ಮತ್ತಿತರ 50ಕ್ಕೂ ಹೆಚ್ಚು ಮಾದರಿಗಳು ಗಮನ ಸೆಳೆದವು.
ಉಪನ್ಯಾಸಕರಾದ ಮನೋಹರ್ ಕಾನ್ಕತ್ರಿ, ನಿತೀಶ್ ತಳವಾರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಾಚಾರ್ಯ ದಿನೇಶ್ ಆರ್. ನಾಯ್ಕ, ಪ್ಲೇಸ್ಮೆಂಟ್ ಅಧಿಕಾರಿ ನಂದ ಕುಮಾರ್ ತೋರಸ್ಕರ್, ತರಬೇತಿ ಅಧಿಕಾರಿ ವಾಸುದೇವ ವಾಡೇಕರ್, ವಿಕ್ರಂ ಲೋಕಂಡೆ, ಸುಕುಮಾರ್ ಉಪಾಧ್ಯ, ಪ್ರವೀಣ್ ಕುಲಕರ್ಣಿ, ಬಸವರಾಜ್ ಬಡಿಗೇರ, ಸಾಂಸ್ಕೃತಿಕ ವಿಭಾಗದ ದಿನೇಶ್ ಡಿ. ನಾಯ್ಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.