ADVERTISEMENT

ವೇಶ್ಯಾವಾಟಿಕೆ: ಮಹಿಳೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:58 IST
Last Updated 25 ಜೂನ್ 2025, 15:58 IST

ಭಟ್ಕಳ: ಮುರುಡೇಶ್ವರದ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಸಿಪಿಐ ಸಂತೋಷ ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಹಣಮಂತ ಬೀರಾದಾರ ಬುಧವಾರ ದಾಳಿ ನಡೆಸಿ ಕೋಲ್ಕತ್ತ ಮೂಲದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.

‘ಮಹಿಳೆಗೆ ಹಣದ ಆಮಿಷ ತೋರಿಸಿ ಬೆಂಗಳೂರಿನಿಂದ ಕರೆತಂದು ಲಾಡ್ಜ್‌ನಲ್ಲಿ ಇಟ್ಟು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಮಹಿಳೆಯನ್ನು ಸಾಂತ್ವನ ಕೇಂದ್ರದಲ್ಲಿ ಬಿಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಕಾರಣರಾದ ಸಿದ್ದಾಪುರದ ನಿವಾಸಿ ಗಣೇಶ ನಾಯ್ಕ, ಮುರುಡೇಶ್ವರ ನಿವಾಸಿಗಳಾದ ವಿನಾಯಕ ನಾಯ್ಕ, ಆಕಾಶ್ ಅನಿಲ್ ಮುರ್ಡೇಶ್ವರ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.