ADVERTISEMENT

ಭಟ್ಕಳ: ಬಹುಮುಖ ಪ್ರತಿಭೆ ಶ್ರೀಧರ್‌ಗೆ ರಾಜ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 4:43 IST
Last Updated 5 ಸೆಪ್ಟೆಂಬರ್ 2025, 4:43 IST
ಶಿಕ್ಷಕ ಶ್ರೀಧರ ಶೇಟ್‌ ಶಿರಾಲಿ
ಶಿಕ್ಷಕ ಶ್ರೀಧರ ಶೇಟ್‌ ಶಿರಾಲಿ   

ಭಟ್ಕಳ: ತಾಲ್ಲೂಕಿನ ಜಾಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಈ ಬಾರಿಯ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆಯಾಗಿದ್ದಾರೆ.

ಕವಿ, ಲೇಖಕ, ವ್ಯಂಗ್ಯಚಿತ್ರಕಾರರಾಗಿ ಬಹುಮುಖ ಪ್ರತಿಭೆಯಿಂದಾಗಿ ಜನಮನ್ನಣೆ ಗಳಿಸಿದ್ದಾರೆ. ಇಂಗ್ಲಿಷ್‌ ಭಾಷಾ ಶಿಕ್ಷಕರಾಗಿರುವ ಅವರ ಪರಿಣಾಮಕಾರಿ ಬೋಧನೆಯ ಪರಿಣಾಮದಿಂದ ಪ್ರೌಢಶಾಲೆ ನಿರಂತರ 8 ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ಸಾಧಿಸುತ್ತ ಬಂದಿದೆ. ಈ ಸಾಧನೆಗೆ ಎರಡು ಬಾರಿ ಧಾರವಾಡದ ಡಾ.ಎಚ್.ಎಫ್.ಕಟ್ಟೀಮನಿ ಪ್ರತಿಷ್ಠಾನದ ‘ಶಿಕ್ಷಕ ಪರಿಶ್ರಮ ಹಿರಿಮೆಗೆ ಗೌರವ’ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಹಸಿವು ಸಾಯುವುದಿಲ್ಲ, ಬೇಲಿಯ ಹೂವು, ಬೆರಳ ಸಂಧಿಯಿಂದ, ಕಾವ್ಯ ಜ್ಯೋತಿ ಇತ್ಯಾದಿ ಕವನ ಸಂಕಲಗಳು ಸೇರಿದಂತೆ ಒಟ್ಟು ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಬೇಲಿಯ ಹೂವು’ ಎಂಬ ಮಕ್ಕಳ ಕವನವು ಎನ್‌ಸಿಇಆರ್‌ಟಿಯು ಐದನೇ ತರಗತಿಯ ‘ಕನ್ನಡ ಚಂದನ’ ಪಠ್ಯಪುಸ್ತಕದಲ್ಲಿ ಪ್ರಕಟಿಸಿದೆ.

ADVERTISEMENT

‘ರಾಜ್ಯಮಟ್ಟದ ಪ್ರಶಸ್ತಿ ಸಂದಿರುವುದು ಮತ್ತಷ್ಟು ಸಾಧನೆಗಳನ್ನು ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ಶಿಕ್ಷಕ ಶ್ರೀಧರ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.