
ಪ್ರಜಾವಾಣಿ ವಾರ್ತೆಬೆಂಕಿಯಿಂದ ಹಾನಿಗೊಂಡಿರುವ ಮಿಲ್
ಗೋಕರ್ಣ: ಸಮೀಪದ ಹನೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಮೆ ಗ್ರಾಮದ ಹೊಸಕೇರಿಯ ಕಟ್ಟಿಗೆ ಮಿಲ್‌ಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕಟ್ಟಿಗೆ ಸುಟ್ಟುಹೋದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.
ಶಂಕರ ಈರಯ್ಯ ಆಚಾರ್ಯ ಅವರಿಗೆ ಸೇರಿದ ಮಿಲ್ ಇದಾಗಿದೆ. ಮಿಲ್‌ನಲ್ಲಿ ಯಾರೂ ಇರಲಿಲ್ಲ. ಸುಮಾರು 2.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಕುಮಟಾ ಮತ್ತು ಅಂಕೋಲಾದಿಂದ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿದ್ದಾರೆ.
ಗೋಕರ್ಣ ಭಾಗದಲ್ಲಿ ಎರಡು ದಿನದಲ್ಲಿ ಅಗ್ನಿ ಅವಘಡದ 2 ಘಟನೆ ಸಂಭವಿಸಿದೆ. ಗೋಕರ್ಣಕ್ಕೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಬೇಕು ಎಂಬ ಆಗ್ರಹ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.