
ಪ್ರಜಾವಾಣಿ ವಾರ್ತೆ
ಭಟ್ಕಳ: ತಾಲ್ಲೂಕಿನ ಮುರುಡೇಶ್ವರದಲ್ಲಿ ಸಮುದ್ರಕ್ಕೆ ಬಿದ್ದಿದ್ದ ಪ್ರವಾಸಿಯೊಬ್ಬರನ್ನು ಜಲಸಾಹಸ ಕ್ರೀಡೆ ನಡೆಸುವ ಸಂಸ್ಥೆಯ ಸಿಬ್ಬಂದಿ ಶುಕ್ರವಾರ ರಕ್ಷಣೆ ಮಾಡಿದ್ದಾರೆ.
ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆಯ ರಭಸಕ್ಕೆ ಬೆಳಗಾವಿ ಮೂಲದ ಪ್ರವಾಸಿಗ ಪ್ರಸಾದ್ ಎಂಬುವವರು ಕೊಚ್ಚಿಹೋಗಿದ್ದರು. ಇದನ್ನು ಗಮನಿಸಿದ ಓಶಿಯನ್ ಅಡ್ವೆಂಚರ್ ಸಿಬ್ಬಂದಿ ವೀಘ್ನೇಶ್ವರ ಹರಿಕಾಂತ ಹಾಗೂ ಜೀವರಕ್ಷಕ ರಾಜೇಶ ವಾಟರ್ ಬೈಕ್‌ನಲ್ಲಿ ಸಾಗಿ ದಡದತ್ತ ಎಳೆದುತಂದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಅಲೆಯ ರಭಸಕ್ಕೆ ಸಿಲುಕಿದ ಪ್ರವಾಸಿಗನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಸಮೀಪದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.