ADVERTISEMENT

ಉತ್ತರ ಕನ್ನಡ: ಮಳೆಗಾಲದಲ್ಲಿ ಅಣಬೆಗಳ ಸಾಮ್ರಾಜ್ಯ!

ಬಣ್ಣ ಬಣ್ಣದ, ವಿವಿಧ ವಿನ್ಯಾಸಗಳ ಶಿಲೀಂಧ್ರಗಳ ಆಕರ್ಷಣೆ

ಸದಾಶಿವ ಎಂ.ಎಸ್‌.
Published 3 ಜುಲೈ 2021, 19:30 IST
Last Updated 3 ಜುಲೈ 2021, 19:30 IST
ಮಳೆಗಾಲದಲ್ಲಿ ಕಣ್ಮನ ಸೆಳೆಯುವ ಕಿತ್ತಳೆ ಬಣ್ಣದ ಶಿಲೀಂಧ್ರ (ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್)
ಮಳೆಗಾಲದಲ್ಲಿ ಕಣ್ಮನ ಸೆಳೆಯುವ ಕಿತ್ತಳೆ ಬಣ್ಣದ ಶಿಲೀಂಧ್ರ (ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್)   

ಕಾರವಾರ: ಮಳೆಗಾಲ ಶುರುವಾಗುತ್ತಿದ್ದಂತೆ ಜಿಲ್ಲೆಯ ಮಲೆನಾಡಿನಲ್ಲಿ, ಕರಾವಳಿಯ ವಿವಿಧೆಡೆ ಅಣಬೆಗಳ ಸಾಮ್ರಾಜ್ಯ ತಲೆಯೆತ್ತುತ್ತದೆ. ವಿವಿಧ ಬಣ್ಣಗಳ, ಆಕಾರಗಳ ಈ ಶಿಲೀಂಧ್ರಗಳು ಪರಿಸರ ಪ್ರಿಯರನ್ನು ಆಕರ್ಷಿಸುತ್ತವೆ.

ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಹಳೆಯ ಮರ, ಎಲೆಗಳ ಮೇಲೆ ಬೆಳೆಯುವ ಕಾಡು ಅಣಬೆಗಳಲ್ಲಿ ನೂರಾರು ಪ್ರಭೇದಗಳಿವೆ. ಅವುಗಳಲ್ಲಿ ಕೆಲವನ್ನು ಆಹಾರವಾಗಿಯೂ ಬಳಕೆ ಮಾಡಲಾಗುತ್ತದೆ. ಅವುಗಳ ರುಚಿಯನ್ನು ಬಲ್ಲವರು, ಪ್ರತಿ ಮಳೆಗಾಲದಲ್ಲಿ ಒಮ್ಮೆಯಾದರೂ ಹುಡುಕಿ ತಂದು ಪದಾರ್ಥ ಮಾಡಿ ಬಾಯಿ ಚಪ್ಪರಿಸುತ್ತಾರೆ.‌

ಬಣ್ಣಬಣ್ಣದ ಅಣಬೆಗಳ ಲೋಕದ ಪ್ರಮುಖವಾದ ಪ್ರಭೇದಗಳಲ್ಲಿ ಇದೂ ಒಂದು

ಕೆಲವು ಅಣಬೆಗಳು ಆಕರ್ಷಕವಾಗಿ ಕಂಡರೂ ಅತ್ಯಂತ ವಿಷಯುಕ್ತವಾಗಿಯೂ ಇರುತ್ತವೆ. ಮನುಷ್ಯನ ದೇಹಪ್ರಕೃತಿಗೆ ಒಗ್ಗದೇ ಜೀವಕ್ಕೇ ಅಪಾಯ ಬಂದ ಉದಾಹರಣೆಗಳೂ ಇವೆ. ಹಾಗಾಗಿ, ಕಾಡು ಅಣಬೆಗಳನ್ನು ಆಹಾರವಾಗಿ ಆಯ್ಕೆ ಮಾಡಿಕೊಳ್ಳಲು ಅನುಭವದ ಅಗತ್ಯವಿದೆ. ಇಲ್ಲದಿದ್ದರೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ.

ADVERTISEMENT

ಮಳೆಗಾಲ ಅರಳುವ ಕೆಲವು ಪ್ರಜಾತಿಯ ಅಣಬೆಗಳು, ಕೆಲವೇ ದಿನಗಳಲ್ಲಿ ನಶಿಸಿ ಹೋಗುತ್ತವೆ. ಆದರೆ, ಕೆಲವು ತಿಂಗಳುಗಟ್ಟಲೆ ಉಳಿದು, ಬಿಸಿಲಿಗೆ ಒಣಗಿ ಆಕರ್ಷಕ ಗೃಹಾಲಂಕಾರ ಪರಿಕರವಾಗಿಯೂ ಬಳಕೆಯಾಗುತ್ತವೆ. ಹೀಗೆ ಪ್ರಕೃತಿಯ ವಿವಿಧ ಅದ್ಭುತಗಳಲ್ಲಿ ಒಂದಾಗಿರುವ ಅಣಬೆಗಳು ಮಳೆಗಾಲದ ಸೊಬಗನ್ನು ಮತ್ತಷ್ಟು ರಂಗೇರಿಸುತ್ತವೆ.

ಮೊಟ್ಟೆಯಾಕಾರದ ಬಿಳಿ ಬಣ್ಣದ ಅಣಬೆಗಳ ಗುಚ್ಛ
ಮರದ ಕಾಂಡದಲ್ಲಿ ಅಗಲವಾದ ಅಣಬೆಗಳ ಸೊಬಗು ಹೀಗಿದೆ
ಮಳೆಗಾಲದಲ್ಲಿ ಕಣ್ಮನ ಸೆಳೆಯುವ ವಿವಿಧ ರೀತಿಯ ಅಣಬೆಗಳು
ಮಣ್ಣಿನ ಗೋಡೆಯಲ್ಲಿ ಬಿಳಿ ಬಣ್ಣದ ಅಣಬೆಗಳು ಮೂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.