ADVERTISEMENT

ಕಾರವಾರ: ನಕಲಿ ದಾಖಲೆ ನೀಡಿ ನೌಕಾನೆಲೆ ಪ್ರವೇಶಕ್ಕೆ ಯತ್ನ, ಯುವಕನ ಬಂಧನ 

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 3:53 IST
Last Updated 6 ಜುಲೈ 2022, 3:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಭಾರತೀಯ ನೌಕಾಪಡೆಯ ಉದ್ಯೋಗಿ ಎಂದು ನಕಲಿ ಗುರುತಿನ ಚೀಟಿ ಹಾಗೂ ದಾಖಲೆಗಳನ್ನು ಸೃಷ್ಟಿಸಿ ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಕಿರಣ್ ಎಸ್.ಆರ್ (28) ಆರೋಪಿಯಾಗಿದ‌್ದಾನೆ.

ಅರಗಾದಲ್ಲಿರುವ ನೌಕಾನೆಲೆಯ ಮುಖ್ಯ ದ್ವಾರಕ್ಕೆ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಂದ ಆತ, ತನ್ನನ್ನು ನೌಕಾಪಡೆಯ 'ಪ್ರೊಬೆಷನರಿ ಸಬ್ ಲೆಫ್ಟಿನೆಂಟ್ ಆಫೀಸರ್' ಎಂದು ಪರಿಚಯಿಸಿಕೊಂಡಿದ್ದ. ಮಾನವ ಸಂಪನ್ಮೂಲ ಮತ್ತು ಯೋಜನಾ ನಿರ್ದೇಶನಾಲಯದಿಂದ (ಡಿ.ಎಂ.ಪಿ.ಆರ್) 2021ರ ಡಿ.14ರಂದು ತನ್ನ ನೇಮಕಾತಿಯಾಗಿದೆ ಎಂದು ಹೇಳಿಕೊಂಡಿದ್ದ. ತನ್ನ ಗುರುತಿನ ಚೀಟಿ ಮತ್ತು ಅದಕ್ಕೊಂದು ಸಂಖ್ಯೆಯನ್ನೂ ಸಿದ್ಧಪಡಿಸಿಕೊಂಡಿದ್ದ.

ಆತ ನೀಡಿದ ದಾಖಲೆಗಳು ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎಂಬುದು ದೃಢವಾಯಿತು. ಬಳಿಕ ನೌಕಾನೆಲೆಯ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದರು.

ADVERTISEMENT

ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.