
ಹೊಸಪೇಟೆಯ ಉಗಮದೇವಿ ಭವರಲಾಲ್ ನಾಹರ್ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ರೀಚ್ ಮಚ್ ಹೈಯರ್ ಫೌಂಡೇಷನ್ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಬ್ಯೂಟಿಷಿಯನ್ ತರಬೇತಿ ಕಾರ್ಯಕ್ರಮದಲ್ಲಿ ಗುರುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಫಲಾನುಭವಿಗಳಿಗೆ ಬ್ಯೂಟಿಷಿಯನ್ ಕಿಟ್ ವಿತರಿಸಿದರು
ಹೊಸಪೇಟೆ (ವಿಜಯನಗರ): ನಗರದ ಉಗಮದೇವಿ ಭವರಲಾಲ್ ನಾಹರ್ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಬೆಂಗಳೂರಿನ ರೀಚ್ ಮಚ್ ಹೈಯರ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಬ್ಯೂಟಿಷಿಯನ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗುರುವಾರ 25 ಮಂದಿಗೆ ಬ್ಯೂಟಿಷಿಯನ್ ಕಿಟ್ ವಿತರಿಸಲಾಯಿತು.
ಸಖಿ ಟ್ರಸ್ಟ್‌ನ ನಿರ್ದೇಶಕಿ ಎಂ.ಭಾಗ್ಯಲಕ್ಷ್ಮೀ ಮಾತನಾಡಿ, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಈ ಕಾರ್ಯಕ್ರಮವಾಗಿದ್ದು, ಹೆಣ್ಣಿನ ಬಲವರ್ಧನೆಗೆ ಅವಕಾಶಗಳು ಕೈಗೂಡಬೇಕು, ಆಗ ಮಾತ್ರ ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸ ಬರುತ್ತದೆ ಎಂದರು.
ಕಾಲೇಜಿನ ಕಾರ್ಯದರ್ಶಿ ಭೂಪಾಳ್ ಪ್ರಹ್ಲಾದ್, ಪ್ರಾಚಾರ್ಯೆ ಪ್ರೊ.ಅನಸೂಯ ಅಂಗಡಿ, ಜಿ.ರಾಮಚಂದ್ರಗೌಡ ಮಾತನಾಡಿದರು. ತರಬೇತುದಾರೆ ಯಶಸ್ವಿ ಬ್ಯುಟಿಷಿಯನ್‍ನ ಜೋಬಾ ಚೋಪ್ರ, ಡಿ.ಎನ್.ಸುಜಾತ, ಕೆ.ಚನ್ನಪ್ಪ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.