ಹರಪನಹಳ್ಳಿ ಪಟ್ಟಣದ ಹೊಸಪೇಟೆ ರಸ್ತೆಯ ಪಕ್ಕದ ಮೈದಾನದ ಕೆಳಭಾಗದಲ್ಲಿ ನಿರ್ಮಿಸಿದ್ದ ಪ್ರತ್ಯೇಕ ಟೆಂಟ್‌ನಲ್ಲಿ ಸೋಮವಾರ ಮುಸ್ಲಿಂ ಮಹಿಳೆಯರು ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಪ್ರಜಾವಾಣಿ ಚಿತ್ರ : ವಿಶ್ವನಾಥ ಡಿ.
ಹರಪನಹಳ್ಳಿ (ವಿಜಯನಗರ ಜಿಲ್ಲೆ): ಪಟ್ಟಣದ ಮೂರು ಕಡೆ ಸೇರಿ ತಾಲ್ಲೂಕಿನಾಧ್ಯಂತ ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಸಹ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷಗಳಲ್ಲಿ ಒಂದೆನಿಸಿತು.
ಹಡಗಲಿ ರಸ್ತೆ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಆಲಿ ಸುನ್ನಿ ಪಂಗಡದ ಸಾವಿರಾರು ಜನರು ಪಾಲ್ಗೊಂಡಿದ್ದರು. ಹೊಸಪೇಟೆ ರಸ್ತೆ ಮೈದಾನದಲ್ಲಿ ಆಲಿ ಆದಿಸ್ ಪಂಗಡದ ಪುರುಷರು ದರ್ಗಾ ಆವರಣದಲ್ಲಿ, ಅದರ ಕೆಳಭಾಗದಲ್ಲಿ ನಿರ್ಮಿಸಿದ್ದ ಪ್ರತ್ಯೇಕ ಟೆಂಟ್‌ನಲ್ಲಿ ಅದೇ ಪಂಗಡದ ಮಹಿಳೆಯರು ಈದ್ ಉಲ್ ಫಿತ್ರ್ (ರಂಜಾನ್) ಪ್ರಾರ್ಥನೆ ಸಲ್ಲಿಸಿದರು. ಎಚ್.ಪಿ.ಎಸ್.ಕಾಲೇಜ್ ಹಿಂಭಾಗ ಮೈದಾನದಲ್ಲೂ ಪ್ರಾರ್ಥನೆ ಜರುಗಿತು.
ಮೌಲ್ವಿ ಸರ್ಖಾಜಿ ಫೀರಸಾಬ್ ಅವರು ರಂಜಾನ್ ಹಬ್ಬದ ಮಹತ್ವ ಮತ್ತು ಅದರ ಆಚರಣೆಯ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸಿದರು. ಬೆಳಿಗ್ಗೆ ಬಿಸಿಲು ಚುರುಕಾಗಿತ್ತು, ತಾಪಮಾನ ಏರುವಷ್ಟರಲ್ಲಿ ಸಾಮೂಹಿಕ ಪ್ರಾರ್ಥನೆ ಮುಕ್ತಾಯಗೊಂಡಿತು. ಮೈದಾನದಲ್ಲಿ ಮುಸ್ಲಿಂ ಯೂತ್ ವೆಲ್ ಫೇರ್ ಅಸೊಸಿಯೇಷನ್ ಸಮಿತಿ ಕಾರ್ಯಕರ್ತರು ಉಚಿತವಾಗಿ ನೀರು ವಿತರಣೆ ಮಾಡಿದರು.
ಮುಸ್ಲಿಂ ಸಮಾಜದ ಮುಖಂಡರಾದ ಬೇಲ್ದಾರ್ ಬಾಷಾ, ಜಾವಿದ್, ದಾದಾಪೀರ್, ಜಾಕೀರ ಹುಸೇನ್, ಮೂಸಾಸಾಬ್, ಶಮಿವುಲ್ಲಾ, ಅಲ್ತಾಮಷ್, ಶೆಕ್ಷಾವಲಿ, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಎಚ್.ವಸಂತಪ್ಪ, ಎಲ್.ಮಂಜನಾಯ್ಕ, ಸೋಗಿ ಇಬ್ರಾಹಿಂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.