ADVERTISEMENT

ಕೂಡ್ಲಿಗಿ: ಗೋವಿಂದಗಿರಿ ಚೆಕ್‌ಪೋಸ್ಟ್‌ನಲ್ಲಿ ₹2.40 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 12:53 IST
Last Updated 14 ಏಪ್ರಿಲ್ 2023, 12:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೂಡ್ಲಿಗಿ (ವಿಜಯನಗರ): ಪಟ್ಟಣದ ಹೊರವಲಯದ ಗೋವಿಂದಗಿರಿ ಸಮೀಪದ ಚೆಕ್ ಪೊಸ್ಟ್ ನಲ್ಲಿ ಶುಕ್ರವಾರ ಚುನಾವಣಾ ಸಿಬ್ಬಂದಿ ₹2.40 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ರಾಘವೇಂದ್ರ ರೆಡ್ಡಿ ಎಂಬುವರು ಸಂಡೂರಿನಿಂದ ಚಿತ್ರದುರ್ಗಕ್ಕೆ ಬೈಕಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಚುನಾವಣಾ ಸಿಬ್ಬಂದಿ ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳಿರದ ಕಾರಣ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.