ತೆಕ್ಕಲಕೋಟೆ: ಪಟ್ಟಣದ ರೈತ ವೆಂಕೋಬಣ್ಣ ಅವರ ಕೃಷಿ ಹೊಂಡದಲ್ಲಿ ಮಂಗಳವಾರ ಮೊಸಳೆಯೊಂದು ಕಾಣಿಸಿಕೊಂಡು ಆತಂತ ಸೃಷ್ಟಿಸಿತ್ತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕೋಬ ಯು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಸತತ ಎರಡು ಗಂಟೆ ಕಾರ್ಯಾಚರಣೆ ಬಳಿಕ ಮೊಸಳೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊಸಳೆಯನ್ನು ತುಂಗಭದ್ರಾ ನದಿಗೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಕ್ಷೇತ್ರ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ, ಸಿರುಗುಪ್ಪ ಅರಣ್ಯ ಇಲಾಖೆಯ ಡಿವೈಆರ್‌ಫ್‌ಒ ರಾಜ ಅಂಬಣ್ಣ ನಾಯ್ಕ್, ಹಳೇಕೋಟೆ ಗ್ರಾಮದ ಮೊಸಳೆ ಹಿಡಿಯುವ ವೇಷಗಾರ ಮಲ್ಲಯ್ಯ, ಅರಣ್ಯ ಇಲಾಖೆ ಸಿಬ್ಬಂದಿ ಪುರಂದರ, ದುರ್ಗೇಶ್ ಭಾಗಿಯಾದರು.
ಈ ವರೆಗೆ 143 ಮೊಸಳೆಗಳನ್ನು ಹಿಡಿದು ನದಿಗೆ ಬಿಡಲಾಗಿದೆ ಎಂದು ಆರ್ ಎಫ್ ಒ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.