ADVERTISEMENT

Hampi Utsav: ನಾಳೆಯಿಂದ ಹಂಪಿ ಉತ್ಸವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:08 IST
Last Updated 12 ಫೆಬ್ರುವರಿ 2026, 0:08 IST
<div class="paragraphs"><p>ಹಂಪಿ ಉತ್ಸವ ಪ್ರಯುಕ್ತ ಹಂಪಿಯ ಗಾಯತ್ರಿ ಪೀಠ ಸಮೀಪ ನಿರ್ಮಾಣವಾಗಿರುವ ಶ್ರೀಕೃಷ್ಣದೇವರಾಯನ ದರ್ಬಾರ್‌ ಮಾದರಿಯ ಭವ್ಯ ವೇದಿಕೆ</p></div>

ಹಂಪಿ ಉತ್ಸವ ಪ್ರಯುಕ್ತ ಹಂಪಿಯ ಗಾಯತ್ರಿ ಪೀಠ ಸಮೀಪ ನಿರ್ಮಾಣವಾಗಿರುವ ಶ್ರೀಕೃಷ್ಣದೇವರಾಯನ ದರ್ಬಾರ್‌ ಮಾದರಿಯ ಭವ್ಯ ವೇದಿಕೆ

   

–ಪ್ರಜಾವಾಣಿ ಚಿತ್ರ/ ಲವ ಕೆ.

ಹೊಸಪೇಟೆ (ವಿಜಯನಗರ): ಮೂರು ದಿನಗಳ ಹಂಪಿ ಉತ್ಸವ ಶುಕ್ರವಾರ (ಫೆಬ್ರುವರಿ 13) ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. 

ADVERTISEMENT

ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯನ ದರ್ಬಾರ್ ಮಾದರಿಯ ವೇದಿಕೆಯನ್ನು ಗಾಯತ್ರಿ ಪೀಠ ಸಮೀಪದ ಮೈದಾನದಲ್ಲಿ ನಿರ್ಮಿಸಲಾಗಿದೆ. ‌ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಅವರು ಹಿರಿಯ ಅಧಿಕಾರಿಗಳ ಜತೆಗೆ ಬುಧವಾರ ಮುಖ್ಯ ವೇದಿಕೆ, ಇತರ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಹೆಲಿಕಾಪ್ಟರ್‌ನಲ್ಲಿ ಹಂಪಿಯ ದರ್ಶನ ಮಾಡಿಸುವ ‘ಹಂಪಿ ಬೈ ಸ್ಕೈ’ ಗುರುವಾರ ಬೆಳಿಗ್ಗೆ ಆರಂಭವಾಗಲಿದ್ದು, ಹೊಸಪೇಟೆಯಲ್ಲಿ ಸಂಜೆ ಜಾನಪದ ತಂಡಗಳ ವಸಂತ ವೈಭವ ಶೋಭಾಯಾತ್ರೆ ನಡೆಯಲಿದೆ. ಮೂರು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಹೆಸರಾಂತ ಕಲಾವಿದರು ಪ್ರಸ್ತುಪಡಿಸುವರು. ಪ್ರತಿದಿನ ಸಂಜೆ 7 ಗಂಟೆಗೆ ಮುಖ್ಯ ವೇದಿಕೆಯ ಬಳಿ 15 ನಿಮಿಷಗಳ ಡ್ರೋನ್‌ ಶೋ ಈ ಬಾರಿಯ ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.