ADVERTISEMENT

Photos| ವಿಜಯನಗರದಲ್ಲಿ‌ 'ಮಾಂಡೂಸ್' ಚಂಡಮಾರುತದ ಪ್ರಭಾವ: ಜಡಿ ಮಳೆಗೆ ಜನಜೀವನ ಅಸ್ತವ್ಯಸ್ತ

ಹೊಸಪೇಟೆ (ವಿಜಯನಗರ): ಬಂಗಾಳ ಕೊಲ್ಲಿಗೆ 'ಮಾಂಡೂಸ್' ಚಂಡಮಾರುತ ಅಪ್ಪಳಿಸಿದ್ದು ಅದರ ಪ್ರಭಾವ ಶನಿವಾರ ಜಿಲ್ಲೆಯಲ್ಲೂ ಕಂಡು ಬಂತು.ಶನಿವಾರ ದಿನವಿಡೀ ದಟ್ಟ ಮಂಜು ಆವರಿಸಿಕೊಂಡಿತು. ಸಂಜೆಯಿಂದ ಜಿಟಿಜಿಟಿ ಮಳೆ ಆಗಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ದಟ್ಟ ಮಂಜು, ಮಳೆಗೆ ಚಳಿ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಜಿಲ್ಲೆಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ.ಪ್ರಜಾವಾಣಿ ಚಿತ್ರಗಳು: ಲವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 13:17 IST
Last Updated 10 ಡಿಸೆಂಬರ್ 2022, 13:17 IST
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮಾಂಡೂಸ್' ಚಂಡಮಾರುತದ ಪ್ರಭಾವದಿಂದ ಶನಿವಾರ ವಿಜಯನಗರ ಜಿಲ್ಲೆಯಲ್ಲಿಯೂ ಮಳೆ ಸುರಿಯಿತು.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮಾಂಡೂಸ್' ಚಂಡಮಾರುತದ ಪ್ರಭಾವದಿಂದ ಶನಿವಾರ ವಿಜಯನಗರ ಜಿಲ್ಲೆಯಲ್ಲಿಯೂ ಮಳೆ ಸುರಿಯಿತು.    
ಶನಿವಾರ ದಿನವಿಡೀ ದಟ್ಟ ಮಂಜು ಆವರಿಸಿಕೊಂಡಿತು. ಸಂಜೆಯಿಂದ ಜಿಟಿಜಿಟಿ ಮಳೆ ಆಗಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ.
ದಟ್ಟ ಮಂಜು, ಮಳೆಗೆ ಚಳಿ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ.
ಮಳೆಯಿಂದಾಗಿ ರಸ್ತೆಗಳಲ್ಲಿ ಜನರ ಸಂಚಾರ ವಿರಳವಾಗಿತ್ತು.
ಮಾಂಡೂಸ್‌ ಚಂಡಮಾರುತದ ಪರಿಣಾಮವಾಗಿ ಡಿ. 13ರ ವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಪ್ರಭಾವದ ಜಡಿಯನ್ನು ಜನ ಇನ್ನೂ ಎರಡು ಮೂರು ದಿನ ಸಹಿಸಿಕೊಳ್ಳಲೇ ಬೇಕಿದೆ. (ಪ್ರಜಾವಾಣಿ ಚಿತ್ರಗಳು: ಲವ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.