ADVERTISEMENT

ಹೊಸಪೇಟೆ: ಜಾತ್ರಾ ಮಹೋತ್ಸವಕ್ಕೆ ಅನುಮತಿಗೆ ಶ್ರೀರಾಮಸೇನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 7:36 IST
Last Updated 4 ಫೆಬ್ರುವರಿ 2022, 7:36 IST
ಹೊಸಪೇಟೆ: ಜಾತ್ರಾ ಮಹೋತ್ಸವಕ್ಕೆ ಅನುಮತಿಗೆ ಶ್ರೀರಾಮಸೇನೆ ಆಗ್ರಹ
ಹೊಸಪೇಟೆ: ಜಾತ್ರಾ ಮಹೋತ್ಸವಕ್ಕೆ ಅನುಮತಿಗೆ ಶ್ರೀರಾಮಸೇನೆ ಆಗ್ರಹ   

ಹೊಸಪೇಟೆ (ವಿಜಯನಗರ): ಜಾತ್ರಾ ಮಹೋತ್ಸವ ಆಚರಣೆಗೆ ಅನುಮತಿ ನೀಡಬೇಕೆಂದು ಶ್ರೀರಾಮ ಸೇನೆ ಆಗ್ರಹಿಸಿದೆ.

ಕೋವಿಡ್‌ನಿಂದ ಎರಡು ವರ್ಷಗಳಿಂದ ಜಾತ್ರಾ ಮಹೋತ್ಸವಗಳಿಗೆ ಅವಕಾಶ ಇರಲಿಲ್ಲ. ಸರ್ಕಾರ ಈಗ ಬಹುತೇಕ ಎಲ್ಲ ನಿರ್ಬಂಧಗಳನ್ನು ಹಿಂಪಡೆದಿದೆ. ಆದರೆ, ಇದುವರೆಗೆ ದೇವಸ್ಥಾನ, ಮಠಗಳಲ್ಲಿ ಆಚರಿಸುವ ಜಾತ್ರೆಗಳ ಮೇಲೆ ನಿರ್ಬಂಧ ಹೇರಿರುವುದು ನೋವಿನ ಸಂಗತಿ ಎಂದು ಸೇನೆಯು ಮುಖ್ಯಮಂತ್ರಿ ಹೆಸರಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರ ನಗರದಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಿ ಹಕ್ಕೊತ್ತಾಯ ಮಾಡಿತು.

ಜಾತ್ರೆ, ಉತ್ಸವಗಳು, ರೈತರು, ಕಲಾವಿದರು, ವ್ಯಾಪಾರಿಗಳ ಆದಾಯದ ಮೂಲಗಳಾಗಿವೆ. ನಿರ್ಬಂಧ ಹೇರಿ ಜನರನ್ನು ಸಂಕಷ್ಟಕ್ಕೆ ತಳ್ಳುವುದು ಸರಿಯಲ್ಲ. ಕೋವಿಡ್‌ನಿಂದ ಜನರ ಬದುಕು ದುಸ್ತರವಾಗಿದೆ. ಅವರ ಬದುಕು ಉತ್ತಮಗೊಳಿಸಬೇಕಿದೆ. ಜಾತ್ರೆಗಳು ಸೌಹಾರ್ದತೆ, ಏಕತೆಯ ಪ್ರತೀಕ. ಅವುಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ತಿಳಿಸಿದೆ.

ADVERTISEMENT

ಶ್ರೀರಾಮ ಸೇನೆ ವಿಭಾಗ ಅಧ್ಯಕ್ಷ ಸಂಜೀವ ಮರಡಿ, ತಾಲ್ಲೂಕು ಅಧ್ಯಕ್ಷ ಜಗದೀಶ ಕಾಮಟಗಿ, ಉಪಾಧ್ಯಕ್ಷ ಸೂರಿ ಬಂಗಾರು, ನಾಗರಾಜ, ಮದನ್‌ ಕುಮಾರ್‌ ಮರಿಯಮ್ಮನಹಳ್ಳಿ, ಕೊಟ್ರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.