ನಾಯಿಗಳ ದಾಳಿಯಿಂದಾಗಿ ಕುರಿಮರಿಗಳು ಮೃತಪಟ್ಟಿವೆ
ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹೊಳಗುಂದಿ ಗ್ರಾಮದ ನಿಜಲಿಂಗಪ್ಪ ನಗರದ ಬಳಿಯ ಕುರಿಹಟ್ಟಿಯ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ 23 ಕುರಿಮರಿಗಳು ಸತ್ತಿರುವ ಘಟನೆ ಶನಿವಾರ ಸಂಭವಿಸಿದೆ.
ಗ್ರಾಮದ ಕುರಿಗಾಹಿ ಹುಲುಗಪ್ಪ ಎಂಬುವವರ ಕುರಿಹಟ್ಟಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಹುಲುಗಪ್ಪ ಅವರ 20 ಕುರಿಮರಿ, ಕಂದಗಲ್ ಶಿವರಾಜ್ ಅವರ ಎರಡು, ದೊಡ್ಡಬಸಪ್ಪ ಅವರಿಗೆ ಸೇರಿದ ಒಂದು ಮರಿ ಸತ್ತಿದೆ. ಮರಿಗಳನ್ನು ಹಟ್ಟಿಯಲ್ಲಿ ಕೂಡಿಹಾಕಿ, ಕುರಿಗಳನ್ನು ಮೇಯಿಸಲು ಅಡವಿಗೆ ತೆರಳಿದ್ದಾಗ ನಾಯಿಗಳ ದಾಳಿ ನಡೆದಿದೆ.
‘ಮಧ್ಯಾಹ್ನವರೆಗೆ ಹಟ್ಟಿಯಲ್ಲೇ ಇದ್ದೆ. ಊಟಕ್ಕೆ ಮನೆಗೆ ಹೋಗಿ ಬರುವಷ್ಟರಲ್ಲಿ ನಾಯಿಗಳು ದಾಳಿ ನಡೆಸಿವೆ. ಇದರಿಂದ ಸಾಕಷ್ಟು ನಷ್ಟವಾಗಿದೆ’ ಎಂದು ಹುಲುಗಪ್ಪ ಹೇಳಿದರು.
‘ಗ್ರಾಮ ವ್ಯಾಪ್ತಿಯ ಕುರಿಹಟ್ಟಿಗಳ ಮೇಲೆ ಪದೇ ಪದೇ ಬೀದಿನಾಯಿಗಳ ದಾಳಿ ನಡೆಸುತ್ತಿವೆ. ಇದರಿಂದ ಕುರಿಗಾಹಿಗಳಿಗೆ ಸಂಕಷ್ಟ ಎದುರಾಗಿದ್ದು, ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಶಿವರಾಜ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.