ADVERTISEMENT

ತುಂಗಭದ್ರಾ ಅಣೆಕಟ್ಟೆ: ಅಹಮದಾಬಾದ್ ಕಂಪನಿಗೆ 32 ಗೇಟ್ ಅಳವಡಿಕೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
<div class="paragraphs"><p>ತುಂಗಭದ್ರಾ ಅಣೆಕಟ್ಟೆ</p></div>

ತುಂಗಭದ್ರಾ ಅಣೆಕಟ್ಟೆ

   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಉಳಿದ 32 ಕ್ರಸ್ಟ್‌ಗೇಟ್‍ಗಳನ್ನು ಅಳವಡಿಸುವ ಟೆಂಡರ್ ಅಹಮದಾಬಾದ್‌ನ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರೊಜೆಕ್ಟ್ ಕಂಪನಿಗೆ ಸಿಕ್ಕಿದೆ. ಒಟ್ಟು ನಾಲ್ಕು ಕಂಪನಿಗಳು ಬಿಡ್‍ನಲ್ಲಿ ಪಾಲ್ಗೊಂಡಿದ್ದವು.

‘₹52 ಕೋಟಿ ವೆಚ್ಚದಲ್ಲಿ 32 ಗೇಟ್‍ಗಳನ್ನು ನಿರ್ಮಿಸಿ, ಮುಂದಿನ ವರ್ಷ ಫೆಬ್ರುವರಿ ಬಳಿಕ ನಂತರ ಕಾಮಗಾರಿ ನಡೆಸುವುದಾಗಿ ಕಂಪನಿ ತಿಳಿಸಿದೆ’ ಎಂದು ತುಂಗಭದ್ರ ಮಂಡಳಿಯ ಮೂಲಗಳು ತಿಳಿಸಿವೆ.

ADVERTISEMENT

ಇದೇ ಕಂಪನಿಗೆ 19ನೇ ಕ್ರಸ್ಟ್‌ಗೇಟ್ ಅಳವಡಿಸುವ ಟೆಂಡರ್ ಸಿಕ್ಕಿದ್ದು, ಗೇಟ್ ರಚನೆಯ ಕೆಲಸ ಆರಂಭವಾಗಿದೆ. ಇನ್ನು 20 ದಿನದಲ್ಲಿ 19ನೇ ಗೇಟಿನ ಸ್ಟಾಪ್‌ಲಾಗ್ ಗೇಟ್ ತೆರವುಗೊಳಿಸಿ, ಕ್ರಸ್ಟ್‌ಗೇಟ್ ಅಳವಡಿಸುವ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.