ADVERTISEMENT

ಬಸವನಬಾಗೇವಾಡಿ: ಅಪರಾಧ ತಡೆ ಮಾಸಿಕದ ಅಂಗವಾಗಿ ಪೊಲೀಸರಿಂದ ಜನಜಾಗೃತಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:34 IST
Last Updated 26 ಡಿಸೆಂಬರ್ 2025, 2:34 IST
ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ‌ ಬಸವನಬಾಗೇವಾಡಿ ಪೊಲೀಸ್ ಅಧಿಕಾರಿಗಳು‌ ಮತ್ತು ಸಿಬ್ಬಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು
ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ‌ ಬಸವನಬಾಗೇವಾಡಿ ಪೊಲೀಸ್ ಅಧಿಕಾರಿಗಳು‌ ಮತ್ತು ಸಿಬ್ಬಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು   

ಬಸವನಬಾಗೇವಾಡಿ: ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ‌ ಬಸವನಬಾಗೇವಾಡಿ ಉಪ ವಿಭಾಗ ಹಾಗೂ ಬಸವನಬಾಗೇವಾಡಿ ಪೊಲೀಸ್ ಠಾಣೆ ವತಿಯಿಂದ ಪೊಲೀಸ್ ಅಧಿಕಾರಿಗಳು‌ ಮತ್ತು ಸಿಬ್ಬಂದಿ ಗುರುವಾರ ಪಟ್ಟಣದಲ್ಲಿ ವಿವಿಧಡೆ ಜನಜಾಗೃತಿ ಮೂಡಿಸಿದರು.

ಪಟ್ಟಣದ ಅಟೊ ಸ್ಟ್ಯಾಂಡ್‌ನಲ್ಲಿ ಅಟೊ ಚಾಲಕರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಚಾಲಕರು, ನಿರ್ವಾಹಕರಿಗೆ ಹಾಗೂ ಪಟ್ಟಣದ ಚನ್ನಮ ವೃತ್ತ ಸೇರಿದಂತೆ ವಿವಿಧೆಡೆ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಅಪರಾಧ ತಡೆ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಕಾನೂನು ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಿ ತುರ್ತು‌ ಸಂದರ್ಭಗಳಲ್ಲಿ ಮಹಿಳಾ ಸಹಾಯವಾಣಿ – 1091, ಮಕ್ಕಳ ಸಹಾಯವಾಣಿ - 1098 ಮತ್ತು ತುರ್ತು ಸಹಾಯವಾಣಿ - 112 ಸಂಖ್ಯೆಗಳಿಗೆ ಕರೆ ಮಾಡುವ ಕುರಿತು ಮಾಹಿತಿ ನೀಡಿದರು.

ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪಿಎಸ್ಐ ಎಂ.ಎ. ಮುಲ್ಲಾ, ಎಎಸ್ಐಗಳಾದ ಎ.ಎಚ್. ರೆಡ್ಡರ, ಮಹದೇವಪ್ಪ ತಳವಾರ, ಎಸ್ಎಐ ಎಸ್.ವಾಯ್.ಕುಪ್ಪೇಗೌಡ, ಹೆಡ್ ಕಾನ್ಸಟೇಬಲ್ ಜಗದೀಶ ತಕ್ಕೋಡ, ಕಾನ್ಸಟೇಬಲ್ ಸಂಜು ಕೊಂಡಗೂಳಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.