ADVERTISEMENT

ಇಂಡಿ: ತಾಲ್ಲೂಕಿನ 19 ಕೆರೆ ತುಂಬಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 14:40 IST
Last Updated 5 ಏಪ್ರಿಲ್ 2025, 14:40 IST
ಇಂಡಿಯ ಮಿನಿ ವಿಧಾನಸೌಧ ಎದುರು ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಶನಿವಾರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಲು ಆಗ್ರಹಿಸಿ, ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಅವರಿಗೆ ಮನವಿ ಸಲ್ಲಿಸಿದರು
ಇಂಡಿಯ ಮಿನಿ ವಿಧಾನಸೌಧ ಎದುರು ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಶನಿವಾರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಲು ಆಗ್ರಹಿಸಿ, ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಅವರಿಗೆ ಮನವಿ ಸಲ್ಲಿಸಿದರು    

ಇಂಡಿ: ತಾಲ್ಲೂಕಿನ 19 ಕೆರೆಗಳನ್ನು ತುಂಬಬೇಕು ಎಂದು ಆಗ್ರಹಿಸಿ, ಶನಿವಾರ ತಾಲ್ಲೂಕು ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.

ಅಲ್ಲಿ ರೈತ ಮುಖಂಡ ಗುರುನಾಥ ಬಗಲಿ ಮಾತನಾಡಿ, ತಿಡಗುಂದಿ ಬ್ರಾಂಚ್ ಕಾಲುವೆ ಅಥವಾ ಸಂಖ ಪ್ಯಾಕೇಜ್‌ದಿಂದ ಇಂಚಗೇರಿ, ಸಾತಲಗಾಂವ, ಜಿಗಜಿಣಗಿ ಕೆರೆ ತುಂಬಬೇಕು. ತಡವಲಗಾ, ಹಂಜಗಿ, ಅಥರ್ಗಾ ಸೇರಿದಂತೆ ಹೊರ್ತಿ ಭಾಗದ 19 ಕೆರೆಗಳನ್ನು ತಾಲ್ಲೂಕಿನ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಕೆರೆ ತುಂಬಿಸಬೇಕು ಎಂದರು.

ಕೃಷ್ಣಾ ಕಾಲುವೆಯಿಂದ 6ನೇ ತಾರೀಖಿನಿಂದ ಮುಖ್ಯಕಾಲುವೆಗೆ ತಾಲ್ಲೂಕಿನ ಕೆರೆಗಳನ್ನು ತುಂಬಲು ನೀರು ಬಿಡಲಾಗುವದು ಎಂದು ಕೃಷ್ಣಾ ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ನೀರು ಬಿಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಗ್ರಾಮದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತದೆ ಎಂದ ಅವರು ಸರ್ಕಾರ ಈ ಬಗ್ಗೆ ಗಮನ ಹರಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಎಸಿ ಅನುರಾಧಾ ವಸ್ತ್ರದ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ADVERTISEMENT

ಪ್ರತಿಭಟನೆಯಲ್ಲಿ ಮಲ್ಲನಗೌಡ ಪಾಟೀಲ, ಈರಣ್ಣಾ ಗೊಟ್ಯಾಳ ಮಹಾಂತೇಶ ಮೆಂಡೇದಾರ, ಮೆಹಬೂಬ್ ಮುಲ್ಲಾ, ಈರಣ್ಣಾ ಬಿರಾದಾರ, ಶಿವಶರಣ ನಾವಿ, ಮಳಸಿದ್ದ ನೇಕಾರ, ಮಲ್ಲಿಕಾರ್ಜುನ ನೇಕಾರ, ಶರಣು ತಾರಾಪುರ, ಚನ್ನಪ್ಪ ಮಿರಗಿ, ಚಿದಾನಂದ ಮದರಿ, ಚಂದು ಮಿರಗಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.