ADVERTISEMENT

ದೇವರಹಿಪ್ಪರಗಿ: ವ್ಯಾಪಾರಕ್ಕೆ ಹಣ ತಂದಿಲ್ಲ ಎಂದು ಪತ್ನಿಯನ್ನೇ ಕೊಂದ ಪತಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:14 IST
Last Updated 30 ಆಗಸ್ಟ್ 2025, 7:14 IST
<div class="paragraphs"><p>ಪಾರ್ಕಿಂಗ್ ಜಗಳ ಶಿಕ್ಷಕ ಸಾವು</p></div>

ಪಾರ್ಕಿಂಗ್ ಜಗಳ ಶಿಕ್ಷಕ ಸಾವು

   

ದೇವರಹಿಪ್ಪರಗಿ: ವ್ಯಾಪಾರಕ್ಕೆ ಹಣ ತಂದಿಲ್ಲ ಎಂಬ ಕಾರಣದಿಂದ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ದಾರುಣ ಘಟನೆ ತಾಲ್ಲೂಕಿನ ನಿವಾಳಖೇಡ ಗ್ರಾಮದಲ್ಲಿ ಜರುಗಿದೆ.

ತಾಲ್ಲೂಕಿನ ನಿವಾಳಖೇಡ ಗ್ರಾಮದ ಶಾಂತಾಬಾಯಿ ಮಠಪತಿ (35) ಮೃತರು. ಅವರ ಪತಿ  ವಿರುಪಾಕ್ಷಯ್ಯ ಮಠಪತಿ ಕೊಲೆ ಮಾಡಿದ ಆರೋಪಿ.

ADVERTISEMENT

ವ್ಯಾಪಾರಕ್ಕೆ ಹೆಂಡತಿ ಹಣ ತಂದಿಲ್ಲ ಎಂಬ ಕಾರಣದಿಂದ ತೋಟದ ವಸ್ತಿಯಲ್ಲಿ ಶುಕ್ರವಾರ ಕಬ್ಬಿಣದ ಪೈಪ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಅವನ ಕೃತ್ಯಕ್ಕೆ ಅತ್ತೆ ಹಾಗೂ ಮಾವ ಪ್ರಚೋದನೆ ನೀಡಿದ್ದಾರೆ ಎಂದು ಮೃತರ ತಾಯಿ ದೂರು ದಾಖಲಿಸಿದ್ದಾಳೆ.

ಘಟನಾ ಸ್ಥಳಕ್ಕೆ ಎಸ್.ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್.ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಟಿ.ಎಸ್.ಸೂಲ್ಪಿ ಹಾಗೂ ಪಿಎಸ್ಐ ಸಚೀನ್ ಆಲಮೇಲಕರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.