ADVERTISEMENT

ಪರಿಷತ್‌ ಚುನಾವಣೆ: ಪಿ.ಎಚ್‌.ಪೂಜಾರ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:36 IST
Last Updated 19 ನವೆಂಬರ್ 2021, 16:36 IST
ಪಿ.ಎಚ್.ಪೂಜಾರ
ಪಿ.ಎಚ್.ಪೂಜಾರ   

ವಿಜಯಪುರ: ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ದ್ವಿ ಸದಸ್ಯ ಸ್ಥಾನಕ್ಕೆ ಡಿ.10ರಂದು ನಡೆಯುವ ಚುನಾವಣೆಗೆ ಮಾಜಿ ಶಾಸಕ ಪಿ.ಎಚ್‌.ಪೂಜಾರ ಅವರನ್ನುಬಿಜೆಪಿ ಕಣಕ್ಕಿಳಿಸಿದೆ.

ಲಿಂಗಾಯತರೆಡ್ಡಿ ಸಮುದಾಯಕ್ಕೆ ಸೇರಿದ ಪಿ.ಎಚ್‌.ಪೂಜಾರ ಅವರು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

1997–99 ಹಾಗೂ 1999ರಿಂದ 2004 ಅವಧಿಯಲ್ಲಿ ಎರಡು ಬಾರಿಬಾಗಲಕೋಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ತೊರೆದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸುತ್ತಿ, ಮರಳಿ ಬಿಜೆಪಿ ತೆಕ್ಕೆಗೆ ಸೇರಿದರು.

ಬಹಳ ವರ್ಷಗಳಿಂದ ಯಾವುದೇ ಸ್ಥಾನಮಾನಗಳಿಲ್ಲದೇ ರಾಜಕೀಯ ಕಡೆಗಣನೆಗೆ ಒಳಗಾಗಿದ್ದರು. ಇದೀಗ ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ. ಪೂಜಾರ ಸ್ಪರ್ಧೆ ಚುನಾವಣಾ ಕಣವನ್ನು ರಂಗೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.