ADVERTISEMENT

ಸಿದ್ಧಸಿರಿ: ₹1,400 ಕೋಟಿ ಠೇವಣಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 11:31 IST
Last Updated 5 ಏಪ್ರಿಲ್ 2022, 11:31 IST
ವಿಜಯಪುರ ನಗರದ ಸಾಯಿಪಾರ್ಕ್‍ನ ಸದಾಶಿವನಗರದಲ್ಲಿರುವ ಸಿದ್ಧಸಿರಿ ಶಾಖೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಗಣ್ಯರು
ವಿಜಯಪುರ ನಗರದ ಸಾಯಿಪಾರ್ಕ್‍ನ ಸದಾಶಿವನಗರದಲ್ಲಿರುವ ಸಿದ್ಧಸಿರಿ ಶಾಖೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಗಣ್ಯರು   

ವಿಜಯಪುರ:ಒಂದೇ ವರ್ಷದಲ್ಲಿ ₹6 ಕೋಟಿ ಠೇವಣಿ ಸಂಗ್ರಹಿಸಿರುವ ನಗರದ ಸಾಯಿಪಾರ್ಕ್‍ನ ಸದಾಶಿವನಗರದಲ್ಲಿರುವ ಸಿದ್ಧಸಿರಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಆಚರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ, ನಿರಂತರ ಸೇವೆಯ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿಯು ರಾಜ್ಯದಾದ್ಯಂತ 144 ಶಾಖೆಗಳನ್ನು ಹೊಂದಿ ಕೇವಲ 15 ವರ್ಷಗಳಲ್ಲಿ ₹1400 ಕೋಟಿ ಠೇವಣಿ ಸಂಗ್ರಹಿಸಿ, ಸಹಕಾರಿ ವಲಯದಲ್ಲಿ ದಾಖಲೆ ಮಾಡಿದೆ ಎಂದರು.

ಸಿದ್ಧಸಿರಿ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಕ್ರಾಂತಿಕಾರಿ ಹೆಜ್ಜೆ, ಜನರು ಅವರ ಮೇಲೆ ಇಟ್ಟಿರುವ ವಿಶ್ವಾಸ, ಆಡಳಿತ ಮಂಡಳಿಯ ಸಹಕಾರ ಹಾಗೂ ಸಿಬ್ಬಂದಿಯ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ADVERTISEMENT

ಸಿದ್ದರಾಮಪ್ಪ ಉಪ್ಪಿನ ಮಾತನಾಡಿ, ಸಿದ್ಧಸಿರಿ ಸೌಹಾರ್ದವು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳವಣಿಗೆಯಾಗಿ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ರಾಜ್ಯದಲ್ಲಿರುವ 5000 ಸೌಹಾರ್ದಗಳಲ್ಲಿ ಸಿದ್ಧಸಿರಿಯು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯ ಎಂದರು.

ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿಬಾ ಖಂಡಾಗಳೆ, ಕೃಷ್ಣಮೂರ್ತಿ, ಉಮಾದೇವಿ ಹಿರೇಮಠ, ಉಮೇಶ ಹರಿವಾಳ, ರಾಜಶೇಖರ ಪಾಟೀಲ್, ವಾಗೇಶ ಮಠ, ಸಿಬ್ಬಂದಿಗಳಾದ ಅರವಿಂದ ಕುಲಕರ್ಣಿ, ಸಂದೀಪ ಗುಡೂರ, ಆನಂದ ಹೆಗಡೆ, ಮಾಣೀಕ ಗೊಲಾಂಡೆ, ಸಿದ್ದು ಭಜಂತ್ರಿ, ಬಸಂತಿ ಪೂಜಾರಿ, ಸುಶೀಲ್ ತಿಪ್ಪಣ್ಣವರ, ರಾಜಶೇಖರ ಬಿದರಕೋಟಿ, ಸಂತೋಷ ಪಡನಾಡ, ಮಾಂತೇಶ ಪೂಜಾರಿ, ಚೇತನ್ ಜಾಧವ್, ಬಸವರಾಜ ವಾಲೀಕಾರ, ಕೃಷ್ಣಾ ಪಾರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.