ADVERTISEMENT

ಶಿಕ್ಷಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ: ಶಾಸಕ ವಿಠ್ಠಲ ಕಟಕಧೊಂಡ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 6:47 IST
Last Updated 7 ಡಿಸೆಂಬರ್ 2025, 6:47 IST
<div class="paragraphs"><p>ಚಡಚಣದ&nbsp;ಎಮ್ ಇ&nbsp;&nbsp;ಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ&nbsp; &nbsp;ಪ್ರಾಥಮಿಕ ಶಾಲಾ ಶಿಕ್ಷಕರ 'ಗುರು ಸ್ಪಂದನ " ಕಾರ್ಯಕ್ರಮವನ್ನು ಶಾಸಕ ವಿಠ್ಠಲ ಕಟಕಧೊಂಡ&nbsp;ಉದ್ಘಾಟಿಸಿದರು.</p></div>

ಚಡಚಣದ ಎಮ್ ಇ  ಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ   ಪ್ರಾಥಮಿಕ ಶಾಲಾ ಶಿಕ್ಷಕರ 'ಗುರು ಸ್ಪಂದನ " ಕಾರ್ಯಕ್ರಮವನ್ನು ಶಾಸಕ ವಿಠ್ಠಲ ಕಟಕಧೊಂಡ ಉದ್ಘಾಟಿಸಿದರು.

   

ಚಡಚಣ: ‘ಶಿಕ್ಷಕರು ಕಚೇರಿಗೆ ಅಲಯುವಂತಾಗದೇ, ಅವರ ಯಾವುದೇ ಸಮಸ್ಯೆಗಳಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಬೇಕು’ ಎಂದು ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.

ಪಟ್ಟಣದ ಎಂಇಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಗುರು ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ನೌಕರರ ಸಂಪೂರ್ಣ ಮಾಹಿತಿ ಒಳಗೊಂಡ ‘ಸೇವಾ ಪುಸ್ತಕ’ ನೌಕರರ ಆತ್ಮ. ಆದ್ದರಿಂದ ನೌಕರರ ಸೇವಾ ಪುಸ್ತಕದಲ್ಲಿ ಸರಿಯಾದ ಮಾಹಿತಿ ಇರುವಂತೆ ನೋಡಿಕೊಳ್ಳಬೇಕು .ಆ ನಿಟ್ಟಿನಲ್ಲಿ ಗುರುಸ್ಪಂದನ ಕಾರ್ಯಕ್ರಮ ಆಯೋಜಿಸಿ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಈ ಕಾರ್ಯ ಶ್ಲಾಘನೀಯ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್.ಸೊನ್ನಗಿ, ‘ಮುಂದಿನ ದಿನಗಳಲ್ಲಿ ಶಿಕ್ಷಕರ ಸೇವಾ ಪುಸ್ತಕ ಸಂಪೂರ್ಣ ಡಿಜಿಟಲೀಕರಣ ಆಗಲಿದೆ. ಆದ್ದರಿಂದ ಶಿಕ್ಷಕರು ತಮಗೆ ಈಗ ಒದಗಿಸಲಾದ ಸೇವಾ ಪುಸ್ತಕದಲ್ಲಿ ತಮ್ಮ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದರು.

ಶಿಕ್ಷಕರ ಸೊಸಾಯಿಟಿಸ್‌ನ ಎಸ್. ಪಾಟೀಲ, ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವಂತ ಉಮರಾಣಿ , ನಿವೃತ್‌ ಪ್ರಾಚಾರ್ಯ ಎಸ್.ಎಂ ಚೋಳಕೆ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ್ ಮಜ್ಜಗಿ, ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಉಪಾಧ್ಯಕ್ಷ ಎಸ್.ಜೆ. ಪಾಟೀಲ,  ಸಂಘಟನೆಯ ಪದಾಧಿಕಾರಿಗಳು ಇದ್ದರು.

ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ. ಶಿಕ್ಷಕರು ಪ್ರಾಮಾಣಿಕವಾಗಿ ಪಾಠಬೋಧನೆ ಮಾಡಿ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು
ಚಿದಾನಂದ ಕಟ್ಟಿಮನಿ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.