ADVERTISEMENT

ವಿಜಯಪುರ: ಜೊಮ್ಯಾಟೊ ಆಹಾರ ವಿತರಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:33 IST
Last Updated 26 ಡಿಸೆಂಬರ್ 2025, 2:33 IST
<div class="paragraphs"><p>ವಿಜಯಪುರ ನಗರದಲ್ಲಿ ಗುರುವಾರ ಜೊಮ್ಯಾಟೊ ಕಂಪನಿಯ ಆಹಾರ ವಿತರಕರು (ಫುಡ್‌ ಡೆಲಿವರಿ ಬಾಯ್ಸ್‌) ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು&nbsp;</p></div>

ವಿಜಯಪುರ ನಗರದಲ್ಲಿ ಗುರುವಾರ ಜೊಮ್ಯಾಟೊ ಕಂಪನಿಯ ಆಹಾರ ವಿತರಕರು (ಫುಡ್‌ ಡೆಲಿವರಿ ಬಾಯ್ಸ್‌) ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು 

   

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಜೊಮ್ಯಾಟೊ ಕಂಪನಿಯ 300ಕ್ಕೂ ಅಧಿಕ ಆಹಾರ ವಿತರಕರು (ಫುಡ್‌ ಡೆಲಿವರಿ ಬಾಯ್ಸ್‌) ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನೂರಾರು ಜೊಮ್ಯಾಟೊ ವಿತರಕರು ಪ್ರತಿಭಟನಾ ಜಾಥಾ ನಡೆಸಿದರು.

ADVERTISEMENT

ಜೊಮ್ಯಾಟೊ ಕಂಪನಿಯ ರೈಡರ್‌ ಇಬ್ರಾಹಿಂ ಮಾತನಾಡಿ, ಆಹಾರ ವಿತರಕರಿಗೆ ನೀಡಲಾಗುತ್ತಿದ್ದ ಸೌಲಭ್ಯ ಕಡಿತ ಮಾಡಲಾಗಿದೆ. ವಿತರಕರನ್ನು ಗಿಗ್‌ ಕಾರ್ಮಿಕರೆಂದು  ಪರಿಗಣಿಸಬೇಕು, ಪಿಎಫ್‌ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

‘ಒಂದು ಕಿ.ಮೀ.ಗೆ ₹10 ನೀಡಬೇಕು, ನಿಗದಿತ ವೇತನ ನೀಡಬೇಕು, ಈ ಮೊದಲು ಪ್ರತಿ ಗಂಟೆಗೆ ₹80 ನೀಡಲಾಗುತಿತ್ತು. ಈಗ ಅರ್ಧದಷ್ಟು ಕಡಿತ ಮಾಡಲಾಗಿದೆ. 14 ಗಂಟೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಕೆಲಸ ಮಾಡುವಂತೆ ಅಂಜಿಸುತ್ತಿದ್ದಾರೆ. ಕೆಲಸದಿಂದ ತೆಗೆದುಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಅಪಘಾತ ಆದರೂ ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ, ಸಂಸಾರ ನಡೆಸುವುದು ಕಷ್ಟವಾಗಿದೆ. ಕಂಪನಿ ಇದರ ಜವಾಬ್ದಾರಿ ವಹಿಸಬೇಕು’ ಎಂದು ಆಗ್ರಹಿಸಿದರು.

ನೂರಾರು ಜೊಮ್ಯಾಟೊ ರೈಡರ್‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.