ADVERTISEMENT

ಯಾದಗಿರಿ: ರೈತ ಮಹಿಳೆಯನ್ನು ತಳ್ಳಿದ್ದ ಪಿಎಸ್‌ಐ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 9:49 IST
Last Updated 29 ಸೆಪ್ಟೆಂಬರ್ 2021, 9:49 IST
ಘಟನೆ ನಡೆದ ಸಂದರ್ಭ
ಘಟನೆ ನಡೆದ ಸಂದರ್ಭ   

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾಬಿತ್ತನೆ ಬೀಜ ಖರೀದಿಸಲು ನಿಂತಿದ್ದ ರೈತ ಮಹಿಳೆಯೊಬ್ಬರನ್ನುಗುರುಮಠಕಲ್ ಠಾಣೆ ಪಿಎಸ್ಐಗಂಗಮ್ಮ ಭದ್ರಾಪುರ ತಳ್ಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗಮ್ಮ ಅವರನ್ನು ಹುಣಸಗಿ ತಾಲ್ಲೂಕಿನ ನಾರಾಯಣಪುರ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

‘ಮಹಿಳಾ ಪಿಎಸ್ಐ ಗಂಗಮ್ಮ ಅವರು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸದೆ ಇಲಾಖೆಯನ್ನು ಮುಜುಗರಕ್ಕೆ ಈಡು ಮಾಡಿರುವುದರಿಂದ ಅವರ ವಿರುದ್ಧ ಪ್ರಾಥಮಿಕ ವಿಚಾರಣೆ ಕೈಗೊಳ್ಳಲಾಗಿದೆ. ಅಲ್ಲದೇ ಅವರನ್ನು ನಾರಾಯಣಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪ್ರಾಥಮಿಕ ವಿಚಾರಣೆಯ ನಂತರ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ಶೇಂಗಾ ಬೀಜ ವಿತರಣೆ ಮಾಡುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಂದೋಬಸ್ತ್ ನೇಮಿಸಿದ್ದು, ಈ ವೇಳೆ ಪಿಎಸ್‌ಐ ಗಂಗಮ್ಮ ಭದ್ರಾಪುರ ಬಂದೋಬಸ್ತ್‌ ಮಾಡುವ ವೇಳೆ ಮಹಿಳೆಯನ್ನು ತಳ್ಳಿದ್ದರು. ರೈತ ಮಹಿಳೆಯನ್ನು ಹಿಂದಕ್ಕೆ ನೂಕಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಲವು ಸಂಘಟನೆಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.