ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ 5 ವರ್ಷದೊಳಗಿನ ಮೂವರು ಮಕ್ಕಳು ಸೇರಿದಂತೆ ಒಟ್ಟು 15 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಿಂದ ಕೋವಿಡ್-19 ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ. ಮೂರು ದಿನಗಳಿಂದ ಪ್ರಕರಣಗಳ ಸಂಖ್ಯೆ ಏರುತ್ತಲೆ ಇದೆ.
ಲಕ್ಷ್ಮಿಪುರ ತಾಂಡಾದ 3 ವರ್ಷದ ಬಾಲಕಿ (ಪ್ರಕರಣ ಸಂಖ್ಯೆ ಪಿ-2113), ಗುರುಮಠಕಲ್ ತಾಲ್ಲೂಕಿನ ಮಗ್ದಂಪುರ ತಾಂಡಾದ 33 ವರ್ಷದ ಪುರುಷ (ಪಿ-2114), ಯಾದಗಿರಿ ತಾಲ್ಲೂಕಿನ ಠಾಣಗುಂದಿ ತಾಂಡಾದ 25 ವರ್ಷದ ಪುರುಷ (ಪಿ-2115), ಗುರುಮಠಕಲ್ ತಾಲ್ಲೂಕಿನ ಮಗ್ದಂಪುರ ತಾಂಡಾದ 17 ವರ್ಷದ ಯುವತಿ (ಪಿ-2116), ಗುರುಮಠಕಲ್ ತಾಲ್ಲೂಕಿನ ಯಲಸತ್ತಿ ಗ್ರಾಮದ 22 ವರ್ಷದ ಮಹಿಳೆ (ಪಿ-2117), ಯಲಸತ್ತಿ ಗ್ರಾಮದ 5 ವರ್ಷದ ಬಾಲಕ (ಪಿ-2118), ಯಾದಗಿರಿ ತಾಲ್ಲೂಕಿನ ಯರಗೋಳ ತಾಂಡಾದ 20 ವರ್ಷದ ಮಹಿಳೆ (ಪಿ-2120), ಯರಗೋಳ ತಾಂಡಾದ 3 ವರ್ಷದ ಬಾಲಕ (ಪಿ-2121) ನಲ್ಲಿ ಕೊರೊನಾ ದೃಢವಾಗಿದೆ.
ಯಾದಗಿರಿ ತಾಲ್ಲೂಕಿನ ಅಲ್ಲಿಪುರ ತಾಂಡಾದ 22 ವರ್ಷದ ಮಹಿಳೆ (ಪಿ-2122), ಯರಗೋಳ ತಾಂಡಾದ 25 ವರ್ಷದ ಮಹಿಳೆ (ಪಿ-2123), ಯರಗೋಳ ತಾಂಡಾದ 30 ವರ್ಷದ ಪುರುಷ (ಪಿ-2124), ಸೌದಗಿರಿ ತಾಂಡಾದ 22 ವರ್ಷದ ಮಹಿಳೆ (ಪಿ-2125), ಯರಗೋಳ ತಾಂಡಾದ 22 ವರ್ಷದ ಮಹಿಳೆ (ಪಿ-2126), ಯರಗೋಳ ತಾಂಡಾದ 20 ವರ್ಷದ ಮಹಿಳೆ (ಪಿ-2127), ಯರಗೋಳ ತಾಂಡಾದ 22 ವರ್ಷದ ಪುರುಷ (ಪಿ-2128) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಮೇ 12ರಂದು ಆಗಮಿಸಿದ್ದವರು.
‘ಪಿ-2114, ಪಿ-2116, ಪಿ-2117 ಮತ್ತು ಪಿ-2118 ಪ್ರಕರಣ ವ್ಯಕ್ತಿಗಳನ್ನು ಮಗ್ದಂಪುರ ತಾಂಡಾದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಪಿ-2115 ವ್ಯಕ್ತಿಯನ್ನು ಹೆಡಗಿಮದ್ರಾ ಸರ್ಕಾರಿ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಬಾಕಿ 10 ಪ್ರಕರಣಗಳ ವ್ಯಕ್ತಿಗಳನ್ನು ಕನ್ಯಾಕೋಳೂರು ಬಾಲಕರ ಮೆಟ್ರಿಕ್ ನಂತರ ವಸತಿನಿಲಯ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.