ADVERTISEMENT

ಮಹಾಶಿವರಾತ್ರಿ: ಹುಣಸಗಿಯಲ್ಲಿ ಖರ್ಜೂರ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 11:01 IST
Last Updated 8 ಮಾರ್ಚ್ 2024, 11:01 IST
<div class="paragraphs"><p>ಶಿವರಾತ್ರಿ ಅಂಗವಾಗಿ ವಜ್ಜಲ ಗ್ರಾಮದ ಸಂಗಮೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು</p></div>

ಶಿವರಾತ್ರಿ ಅಂಗವಾಗಿ ವಜ್ಜಲ ಗ್ರಾಮದ ಸಂಗಮೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು

   

ಹುಣಸಗಿ (ಯಾದಗಿರಿ ಜಿಲ್ಲೆ): ಶಿವರಾತ್ರಿ ಹಬ್ಬದ ಅಂಗವಾಗಿ ತಾಲ್ಲೂಕಿನಲ್ಲಿಡೆ ಶಿವಯೋಗ, ಶಿವನಾಮಸ್ಮರಣೆ ಒಂದೆಡೆಯಾದರೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶಿವ, ಲಿಂಗರೂಪಿ ರುದ್ರದೇವರ ಪೂಜೆಗಾಗಿ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆದಿದೆ.

ರೈತಾಪಿ ವರ್ಗ ಹಾಗೂ ಶಿವಭಕ್ತರು ಬೆಳಿಗ್ಗೆಯಿಂದಲೇ ಖರೀದಿಯಲ್ಲಿ ತೊಡಗಿದ್ದಾರೆ.

ADVERTISEMENT

ಹುಣಸಗಿ ಪಟ್ಟಣದಲ್ಲಿ ಗುರುವಾರ ಹಾಗೂ ಶುಕ್ರವಾರ ಎರಡು ದಿನವೂ ಮಾರುಕಟ್ಟೆ ಜನಗಳಿಂದ ತುಂಬಿಕೊಂಡಿದ್ದು, ಖರ್ಜೂರ, ಪ್ರಣತಿ, ಕಬ್ಬು, ಗೆಣಸು, ವಿವಿಧ ತರಕಾರಿ ಹಣ್ಣುಗಳ ಖರೀದಿಯಲ್ಲಿ ಜನತೆ ತೊಡಗಿಕೊಂಡಿದ್ದಾರೆ. ಎರಡು ದಿನಗಳಿಂದಲೂ ಬಾಳೆಹಣ್ಣು ಮತ್ತು ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು ದ್ರಾಕ್ಷಿ ಕೆ ಜಿಗೆ ₹60 ರಿಂದ ₹70 ಬಾಳೆಹಣ್ಣು ₹60 ಮಾರಾಟ ಮಾಡುತ್ತಿರುವುದಾಗಿ ಹಣ್ಣಿನ ವ್ಯಾಪಾರಿ ಶಾಂತಮ್ಮ ಹೇಳಿದರು.

ಇನ್ನೂ ಶಿವರಾತ್ರಿ ಅಮಾವಾಸ್ಯೆಯ ಅಂಗವಾಗಿ ಬಹುತೇಕ ಜನರು ಗೆಣಸಿನ ಹೋಳಿಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುವ ವಾಡಿಕೆ ಹಾಗೂ ಸಂಪ್ರದಾಯದಿಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೆಣಸು ಮಾರಾಟವಾಗುತ್ತಿದೆ.

ಇನ್ನು ಜೋಡಿ ಕಬ್ಬಿಗೆ ₹50 ರಿಂದ 60 ಯಂತೆ ಮಾರಾಟ ಮಾಡುತ್ತಿರುವುದಾಗಿ ಹೆಬ್ಬಾಳ ಗ್ರಾಮದ ಕಬ್ಬಿನ ವ್ಯಾಪಾರಿ ಶಂಕ್ರಪ್ಪ ಹೇಳಿದರು.

ಕಳೆದ ಎರಡು ದಿನಗಳಿಂದಲೂ ಗೆಣಸು ಕೆ.ಜಿ ಗೆ ₹60 ರಂತೆ ಮಾರಾಟ ಮಾಡುತ್ತಿರುವುದಾಗಿ ವ್ಯಾಪಾರಿ ನಾರಾಯಣ ಹೇಳಿದರು.

ಹಣ್ಣಿನ ಬೆಲೆ ಹಾಗೂ ಖರ್ಜೂರದ ಬೆಲೆ ತುಸು ಏರಿಕೆಯಾಗಿದ್ದರೂ ಸಹಿತ ಹಬ್ಬಕ್ಕಾಗಿ ಖರೀದಿ ಮಾಡುತ್ತಿರುವುದು ಅಗತ್ಯ ವಸ್ತುಗಳಲ್ಲಿ ಒಂದಾಗಿದೆ ಎಂದು ಎಚ್ಚರಪ್ಪ ಪತ್ತಾರ ಹಾಗೂ ಮಲ್ಲಯ್ಯ ಸ್ವಾಮಿ ಗಣಾಚಾರಿ ಹೇಳಿದರು.

ಇತ್ತ ಶುಕ್ರವಾರ ಬೆಳಿಗ್ಗೆಯಿಂದಲೇ ಶಿವ ದೇವಾಲಯ, ಈಶ್ವರ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಬೆಳಿಗ್ಗೆ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ ಅಲಂಕಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಪಟ್ಟಣದ ಇತಿಹಾಸ ಪ್ರಸಿದ್ಧ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸಂಜೆ ದೀಪೋತ್ಸವ ಇದೆ ಎಂದು ಭಕ್ತರು ತಿಳಿಸಿದರು.

ಹುಣಸಗಿ ಪಟ್ಟಣದಲ್ಲಿ ಶಿವರಾತ್ರಿ ಅಂಗವಾಗಿ ಗೆಣಸು ಹಾಗೂ ಹಣ್ಣು ಖರೀದಿಸುತ್ತಿರುವ ಮಹಿಳೆಯರು

ಜೋಡಿ ಕಬ್ಬಿಗೆ ₹60 ರೂಪಾಯಿಯಂತೆ ಹುಣಸಗಿ ಪಟ್ಟಣದಲ್ಲಿ ದಾಖಲೆ ಮಾರಾಟ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.