
ಶಹಾಪುರ: ‘ಮಾಜಿ ಸಚಿವ ದಿ.ಬಾಪುಗೌಡ ದರ್ಶನಾಪುರ ಅವರು ನೇರ ನಡೆನುಡಿಯ ಜನಪರ ಚಿಂತಕ ಹಾಗೂ ದೂರದೃಷ್ಟಿಯ ಅಭಿವೃದ್ಧಿಯ ಹರಿಕಾರರಾಗಿದ್ದರು. ಇಂದಿಗೂ ನಾಡಿನ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿರುವ ಅಪರೂಪದ ರಾಜಕೀಯ ಮುತ್ಸದ್ಧಿಯಾಗಿದ್ದಾರೆ’ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ ತಿಳಿಸಿದರು.
ತಾಲ್ಲೂಕಿನ ಭೀಮರಾಯನಗುಡಿಯಲ್ಲಿ ಶನಿವಾರ ದಿ.ಬಾಪುಗೌಡ ದರ್ಶನಾಪುರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ನಗರದ ಚರಬಸವೇಶ್ವರ ಪ್ರೌಢಶಾಲೆಯ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅವರ 37ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಾಪುಗೌಡರ ಸಾಮಾಜಿಕ ಕಳಕಳಿ, ಅಭಿವೃದ್ಧಿಯ ಚಿಂತನೆ, ಕೃಷಿ, ನೀರಾವರಿ, ಶೈಕ್ಷಣಿಕ ಅಭಿವೃದ್ಧಿಯ ಕಾರ್ಯಗಳಿಂದಾಗಿ ಜನಮಾಸದಲ್ಲಿ ಉಳಿದುಕೊಂಡಿದ್ದಾರೆ. ತಂದೆಯ ಹಾದಿಯಲ್ಲಿ ಸಾಗಿರುವ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ರಾಜ್ಯ ರಾಜಕಾರಣದಲ್ಲಿ ಅಪರೂಪದ ಸರಳ ಸಜ್ಜನಿಕೆಯ ಮಾದರಿ ಜನನಾಯಕರಾಗಿ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ’ ಎಂದರು.
ರೈತ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ‘ಶಹಾಪುರ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಬಾಪುಗೌಡರ ವಿಚಾರಗಳಿಗೆ ಶಾಸನ ಸಭೆಗಳಲ್ಲಿ ತುಂಬಾ ಮಹತ್ವವಿತ್ತು. ಭೀಮರಾಯನಗುಡಿಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಮುಖ್ಯ ಕೇಂದ್ರ ಕಛೇರಿ ಸ್ಥಾಪಿಸಿ ಕಲ್ಯಾಣ ಕರ್ನಾಟಕದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಿದರು. ವಸತಿ ಸೌಕರ್ಯಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದರು’ ಎಂದರು.
ಚರಬಸವೇಶ್ವರ ಗದ್ದುಗೆ ಸಂಸ್ಥಾನದ ವೇದಮೂರ್ತಿ ಬಸವಯ್ಯ ಶರಣರು, ನಗನೂರಿನ ಶರಣಪ್ಪ ಶರಣರು, ಸಚಿವ ಶರಣಬಸಪ್ಪ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ, ಮಧ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಕಾಡಾ ಅಧ್ಯಕ್ಷ ಬಾಬು ಹೊನ್ನನಾಯಕ,ಸೋಮಶೇಖರ ಮಣ್ಣೂರು, ಭೀಮರೆಡ್ಡಿ ಭೈರೆಡ್ಡಿ, ಚರಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ,ಚಂದ್ರಶೇಖರ ಆರಬೋಳ, ಶಂಕ್ರಣ್ಣ ವಣಿಕ್ಯಾಳ, ಸಿದ್ಧಲಿಂಗಣ್ಣ ಆನೆಗುಂದಿ, ಮಾಣಿಕರೆಡ್ಡಿ ಗೋಗಿ, ಗುರುನಾಥರೆಡ್ಡಿ ಪಾಟೀಲ ಹಳಿಸಗರ, ಸುರೇಶ ಸಜ್ಜನ, ಬಸನಗೌಡ ಸುಬೇದಾರ, ಸಿದ್ಧಣ್ಣಗೌಡ ಕೆಂಭಾವಿ, ಹಣಮಂತರಾಯ ದೊರೆ ದಳಪತಿ, ನೀಲಕಂಠ ಬಡಿಗೇರ, ಶ್ರೀಶೈಲ ಹೊಸ್ಮನಿ, ಮಲ್ಲಿಕಾರ್ಜುನ ಪೂಜಾರಿ, ಗೌಡಪ್ಪಗೌಡ ಆಲ್ದಾಳ, ಸಣ್ಣನಿಂಗಪ್ಪ ನಾಯ್ಕೋಡಿ, ಗುಂಡಪ್ಪ ತುಂಬಗಿ, ಅಲ್ಲಾಪಟೇಲ ಮಕ್ತಾಪುರ, ಮಹಾದೇವಪ್ಪ ಸಾಲಿಮನಿ, ಇಬ್ರಾಹಿಂ ಶಿರವಾಳ, ಇಸ್ಮಾಯಿಲ್ ಚಾಂದ್, ತಲತ್ಚಾಂದ್, ಮಲ್ಲಣ್ಣ ಉಳ್ಳುಂಡಗೇರಿ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಬಾಪುಗೌಡ ದರ್ಶನಾಪುರ ಅವರ ಅಭಿಮಾನಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.