ADVERTISEMENT

ಬೌದ್ಧ ವಿಹಾರಕ್ಕೆ ಜಮೀನು ಮಂಜೂರು ಮಾಡಲು ಮನವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:57 IST
Last Updated 18 ಫೆಬ್ರುವರಿ 2026, 4:57 IST
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ ) ಜಿಲ್ಲಾ ಸಮಿತಿ ವತಿಯಿಂದವಡಗೇರಾ ತಹಶೀಲ್ದಾರ್‌ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ ) ಜಿಲ್ಲಾ ಸಮಿತಿ ವತಿಯಿಂದವಡಗೇರಾ ತಹಶೀಲ್ದಾರ್‌ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು   

ವಡಗೇರಾ: ತಾಲ್ಲೂಕಿನ ಮಾಲಹಳ್ಳಿ ಗ್ರಾಮದ ಸರ್ವೇ, ನಂಬರ್ 3 ಇಸ್ಸಾ 4 ರಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದು, ಅದನ್ನು ಬೌದ್ಧ ವಿಹಾರಕ್ಕಾಗಿ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ ) ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಹತ್ತಿಗೂಡೂರ ಶರಣರೆಡ್ಡಿ ನೇತೃತ್ವದಲ್ಲಿ ತಹಶೀಲ್ದಾರ್‌ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

 ‘ಮಾಲಹಳ್ಳಿ ಗ್ರಾಮದಲ್ಲಿ ನಾಲ್ಕು ಗುಂಟೆ ಸರ್ಕಾರಿ ಜಮೀನು ಲಭ್ಯವಿದೆ. ಇದು ಬೌದ್ಧವಿಹಾರಕ್ಕೆ ನಿರ್ಮಾಣಕ್ಕೆ ಸೂಕ್ತವಾಗಿದೆ. ದಲಿತ ಸಮುದಾಯದವರು ಹಾಗೂ ಬೌದ್ಧ ಬಿಕ್ಕಗಳಿಗಾಗಿ ಕಾರ್ಯಕ್ರಮ ಮಾಡಲು ಈ ಜಮೀನು ಬಹಳ ಅನುಕೂಲವಾಗಲಿದೆ. ಹೀಗಾಗಿ ಆ ಜಮೀನು ಮಂಜೂರು ಮಾಡಿ ಬೌದ್ಧ ವಿಹಾರಕ್ಕೆ ಮಿಸಲು ಎಂದು ಪಹಣಿಯಲ್ಲಿ ನಮೂದಿಸಬೇಕು’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಹನುಮಂತ, ಮರಲಿಂಗಪ್ಪ ಶಾಖ, ಹೊನ್ನಯ್ಯ ಶಾಖ, ಮಲ್ಲಿಕಾರ್ಜುನ ಶಾಖ, ಬಾಲಪ್ಪ ಲಿಂಗೇರಿ, ಮಲ್ಲಾ ರೆಡ್ಡಿ ಕುರುಕುಂದಿ, ಮಾನಪ್ಪ ತಳಗೇರ, ಸಾಬಣ್ಣ ಲಿಂಗೇರಿ, ರಾಮಪ್ಪ ಹುಲ್ಕಲ್, ಬಸವರಾಜ ಚಂದ್ರಶೇಖರ, ಸಿದ್ದಪ್ಪ ಹೊಸ್ಮನಿ, ಪರಶುರಾಮ ತುಮಕೂರು, ಚಾಂದ ಹುಸೇನಿ, ಮಮ್ಮದ ಬಾಷಾ, ಮಹೇಬೂಬಅಲಿಸಾಬ ಹಾಗೂ ಇನ್ನಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.