ADVERTISEMENT

ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ರದ್ದು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 1:30 IST
Last Updated 10 ಫೆಬ್ರುವರಿ 2021, 1:30 IST
ತಿಂಥಣಿ ಮೌನೇಶ್ವರ
ತಿಂಥಣಿ ಮೌನೇಶ್ವರ   

ಯಾದಗಿರಿ: ‘ಸುರಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ರದ್ದುಪಡಿಸಲಾಗಿದೆ. ಭಕ್ತರುಸಹಕರಿಸಬೇಕು’ ಎಂದು ಜಿಲ್ಲಾಡಳಿತ ತಿಳಿಸಿದೆ.

‘ಈ ತಿಂಗಳು ಜಾತ್ರೆ ನಡೆಯಬೇಕಿತ್ತು. ಪ್ರತಿ ವರ್ಷ ಹೊರ ಜಿಲ್ಲೆಗಳು ಹಾಗೂ ಅಂತರ ರಾಜ್ಯಗಳಿಂದಲೂ ಭಕ್ತರುಆಗಮಿಸುತ್ತಾರೆ. ಕೋವಿಡ್‌ ತಡೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷ್ಣಾ ನದಿಯ ತಟದಲ್ಲಿರುವ ತಿಂಥಣಿ ಗ್ರಾಮದಲ್ಲಿ ದೇವಸ್ಥಾನವಿದೆ. ಪ್ರತಿವರ್ಷ ಜಾತ್ರಾ ಮಹೋತ್ಸವ ಸರ್ಕಾರಕ್ಕೆ ಅಧಿಕ ಲಾಭ ತಂದು ಕೊಡುತ್ತಿತ್ತು. ಸಾರಿಗೆ, ಭಕ್ತರ ಕಾಣಿಕೆ, ತೆಂಗಿನಕಾಯಿ ಹರಾಜು ಪ್ರಕ್ರಿಯೆ ಮೂಲಕ ಆದಾಯ ಬರುತ್ತಿತ್ತು.ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಪುನಶ್ಚೇತನ ನೀಡಲು ಜಾತ್ರಾ ಮಹೋತ್ಸವ ವರದಾನವಾಗುತ್ತಿತ್ತು.

ADVERTISEMENT

ಶೇ 100ರಷ್ಟು ಸಿನಿಮಾ ಭರ್ತಿಗೆಅವಕಾಶ ಕಲ್ಪಿಸಲಾಗಿದೆ. ಆದರೆ, ದೇವಸ್ಥಾನದ ಉತ್ಸವಗಳಿಗೆ ನಿರ್ಬಂಧ ಏಕೆ ಎಂದು ಭಕ್ತರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.