ADVERTISEMENT

ಪಾದಯಾತ್ರೆಯಿಂದ ಮಾನಸಿಕ ಸಂತೃಪ್ತಿ: ಪತ್ರಕರ್ತ ನಾರಾಯಣಾಚಾರ್ಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 4:46 IST
Last Updated 4 ಫೆಬ್ರುವರಿ 2026, 4:46 IST
ಶಹಾಪುರದ ದಿಗ್ಗಿ ಸಂಗಮೇಶ್ವರ ಭಜನಾ ಮಂಡಳಿ ಭಕ್ತರು ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನೂತನ ಪಲ್ಕಕ್ಕಿಯನ್ನು ಅರ್ಪಿಸಲು ಪಾದಯಾತ್ರೆ ಮೂಲಕ ತೆರಳಿದರು
ಶಹಾಪುರದ ದಿಗ್ಗಿ ಸಂಗಮೇಶ್ವರ ಭಜನಾ ಮಂಡಳಿ ಭಕ್ತರು ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನೂತನ ಪಲ್ಕಕ್ಕಿಯನ್ನು ಅರ್ಪಿಸಲು ಪಾದಯಾತ್ರೆ ಮೂಲಕ ತೆರಳಿದರು   

ಶಹಾಪುರ: ‘ಅನಾದಿಕಾಲದಿಂದ ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಆಧ್ಯಾತ್ಮಿಕ ತಾಣಗಳಿಗೆ ಪಾದಯಾತ್ರೆ ತುಂಬಾ ಮಹತ್ವ ಪಡೆದುಕೊಂಡಿದೆ. ದೇಹವನ್ನು ದಂಡಿಸಿ ಮನಸ್ಸು ಪರಿಶುದ್ಧಗೊಳಿಸುವ ಪಾದಯಾತ್ರೆಯ ನಂತರ ದೇವರ ದರ್ಶನ ಪಡೆದ ಮೇಲೆ ಮನಸ್ಸಿಗೆ ಸಂತೃಪ್ತಿ ನೀಡುತ್ತದೆ’ ಪತ್ರಕರ್ತ ನಾರಾಯಣಾಚಾರ್ಯ ಸಗರ ತಿಳಿಸಿದರು.

‘ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಕೈಗೊಂಡ ದಿಗ್ಗಿ ಸಂಗಮೇಶ್ವರ ಭಜನಾ ಸಂಘದ ಪಾದ ಯಾತ್ರಿಗಳಿಗೆ ಭೇಟಿಯಾಗಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯಲ್ಲಿನ ಪ್ರತಿಯೊಂದು ಆಧ್ಯಾತ್ಮಿಕ ಕಾರ್ಯಚಟುವಟಿಕೆಗಳಿಗೆ ವೈಜ್ಞಾನಿಕ ಹಿನ್ನೆಲೆ ಕಂಡುಬರುತ್ತದೆ. ವರ್ಷಪೂರ್ತಿ ಸಂಸಾರ, ಹೊಲ ಮನೆಯ ದುಡಿಮೆಯಲ್ಲಿ ತೊಡಗಿಸಿಕೊಳ್ಳುವ ಮನುಷ್ಯನಿಗೆ ವಿಶ್ರಾಂತಿಯ, ಖುಷಿ, ನೆಮ್ಮದಿಯ, ಸಂಭ್ರಮದ ಕ್ಷಣಗಳು ಅನುಭವಿಸುವುದು ಅಪರೂಪವಾಗಿದೆ. ಇಂತಹ ವಿಷಮ ವಾತಾವರಣದಲ್ಲಿಯೂ ಭಕ್ತರು ಪಾದಯಾತ್ರೆ ಕೈಕೊಂಡಿರುವುದು ಇನ್ನುಳಿದ ಭಕ್ತರಿಗೆ ಪ್ರೇರಣೆಯಾಗಿದೆ’ ಎಂದರು.

‘ಪಾದಯಾತ್ರಿಗಳಿಗೆ ಭಗವಂತ ಸಕಲಪ್ರಾಪ್ತಿ ಇಷ್ಟಾರ್ಥ ಕಲ್ಪಿಸಲಿ’ ಎಂದು ಪ್ರಾರ್ಥಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.